ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ತೇರಾಳಿ ರಸ್ತೆಯಲ್ಲಿ ಎರಡು ಸಿಡಿ (ಕ್ರಾಸ್ ಡ್ರೈನೇಜ್) ನಿರ್ಮಾಣ ಅತ್ಯಗತ್ಯವಾಗಿದೆ. ಮಳೆಗಾಲದಲ್ಲಿ ನೀರು ರಸ್ತೆಯ ಮೇಲೆ ಹರಿಯುವುದರಿಂದ ಕೆಲ ದಿನಗಳ ಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುತ್ತದೆ.

​ಈ ರಸ್ತೆಯು ಉರುಗಾಳಿ (Urugali), ತೇರಾಳಿ (Terali), ಸಿಸೈ (Sisai), ಭಾಮಣೆ (Bhamane), ಪಾತಗುಡಿ (Patagudi) ಹಾಗೂ ಶಿರ್ವೊಳೆ (shirvole) ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಆದರೆ ರಸ್ತೆಯ ಎರಡು ಭಾಗಗಳು ಇನ್ನೂ ಕಚ್ಚಾ ರಸ್ತೆಯಾಗಿರುವುದರಿಂದ ಮಳೆಗಾಲದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

​ಸಂಬಂಧಪಟ್ಟ ಇಲಾಖೆ ಶೀಘ್ರವೇ ಎರಡು ಸಿಡಿ ನಿರ್ಮಿಸಿ, ಕಚ್ಚಾ ರಸ್ತೆಯನ್ನು ಪಕ್ಕಾ ರಸ್ತೆಯಾಗಿ ಅಭಿವೃದ್ಧಿಪಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.