ಸುದ್ಧಿಕನ್ನಡ ವಾರ್ತೆ
ಹರಿಯಾಣದ ಸೋನಿಪತ್ ನಲ್ಲಿರುವ ವೃದ್ಧಾಶೃಮವೊಂದರಲ್ಲಿ ನಡೆದ ಘಟನೆಯು ಆಧುನಿಕ ಕೌಟುಂಬಿಕ ಮೌಲ್ಯಗಳು ಮತ್ತು ಬದಲಾಗುತ್ತಿರುವ ಸಾಮಾಜಿಕ ಸಂಬಂಧಗಳ ಕುರಿತು ಗಂಭೀರ ಪ್ರಶ್ನೆ ಹುಟ್ಟುಹಾಕಿದೆ….?
ಮುಂಬಯಿಯ ಪ್ರಸಿದ್ಧ ಜವಳಿ ವ್ಯಾಪಾರಿ ಎಂದೇ ಒಂದು ಕಾಲದಲ್ಲಿ ಪ್ರಸಿದ್ಧಿಯಾಗಿದ್ದ 74 ವರ್ಷದ ಶಿವಚರಣ ರಾಮರತನ್ ಗುಪ್ತಾ ರವರು ಸೋನಿಪತ್ ನಲ್ಲಿರುವ ವೃದ್ಧಾಶೃಮದಲ್ಲಿ ನಿಧನರಾದರು. ದುರಾದೃಷ್ಠಕರ ಸಂಗತಿಯೆಂದರೆ ಅವರ ಮೂವರೂ ಹೆಣ್ಣುಮಕ್ಕಳು ಅಂತ್ಯಕ್ರಿಯೆಗೆ ಹಾಜರಾಗಲು ಸಾಧ್ಯವಾಗದೆಯೇ ವೀಡಿಯೋ ಕಾಲ್ ಮೂಲಕ ತಮ್ಮ ತಂದೆಯ ಅಂತ್ಯಸಂಸ್ಕಾರ ವೀಕ್ಷಿಸಿ ಅವರಿಗೆ ವಿದಾಯ ಹೇಳಿದ್ದಾರೆ.
ಶಿವಚರಣ್ ಗುಪ್ತಾ ರವರು ಕಳೆದ ಮೂರು ವರ್ಷಗಳಿಂದ ಸೋನಿಪತ್ ನಲ್ಲಿರುವ ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದರು. ಅವರ ಪತ್ನಿ ಕೂಡ ಅದೇ ವೃದ್ಧಾಶೃಮದಲ್ಲಿದ್ದರು. ಎರಡು ವರ್ಷಗಳ ಹಿಂದೆ ಪತ್ನಿ ನಿಧನರಾಗಿದ್ದರು. ಶಿಚರಣ್ ಗುಪ್ತಾ ರವರ ನಿಧನವಾದ ಕೂಡಲೇ ವೃದ್ಧಾಶೃಮ ಆಡಳಿತ ಮಂಡಳಿಯು ಮುಂಬಯಿಯಲ್ಲಿ ವಾಸಿಸುತ್ತಿದ್ದ ಅವರ ಹೆಣ್ಣುಮಕ್ಕಳನ್ನು ಸಂಪರ್ಕಿಸಿದರು. ಅವರ ತಂದೆಯ ಸಾವಿನ ಬಗ್ಗೆ ತಿಳಿಸಿ ಅಂತ್ಯಕ್ರಿಯೆ ಬಗ್ಗೆ ಕೇಳಿದಾಗ ಮುಂಬಯಿಗೆ ತರುವ ಬದಲು ಸೋನಿಪತ್ ನಲ್ಲಿಯೇ ಅಂತ್ಯಕ್ರಿಯೆ ನಡೆಸುವಂತೆ ವಿನಂತಿಸಿದರು. ಅಂತ್ಯಕ್ರಿಯೆ ಖರ್ಚಿಗಾಗಿ 5100 ರೂಗಳನ್ನು ವೃದ್ಧಾಶ್ರಮದ ಖಾತೆಗೆ ಆನ್ ಲೈನ್ ವರ್ಗಾವಣೆ ಮಾಡಿದರು.
ತಂದೆಯ ಅಂತ್ಯಕ್ರಿಯೆಯ ಸಂಪೂರ್ಣ ವಿಧಿಯನ್ನು ವೀಡಿಯೋ ಕಾಲ್ ಮೂಲಕ ಮಗಳು ವೀಕ್ಷಿಸಿದಳು.
ಹೊಸ ಹೊಸ ತಂತ್ರಜ್ಞಾನವು ಜಗತ್ತನ್ನು ಹತ್ತಿರಕ್ಕೆ ತಂದಿದ್ದರೂ ನಮ್ಮ ಸಂಬಂಧಗಳನ್ನು ದೂರಾಗಿಸುತ್ತಿದೆ. ಈಗಲೇ ಜಗತ್ತು ಇಷ್ಟೊಂದು ಮುಂದುವರೆದಿರುವಾಗ ಇನ್ನು ಮುಂದೆ ಇನ್ನೆಚ್ಚು ಮುಂದಕ್ಕೆ ಹೋಗಬಹುದು ಊಹಿಸಲು ಸಾಧ್ಯವೇ…?
