ಸುದ್ಧಿಕನ್ನಡ ವಾರ್ತೆ
ಪಣಜಿ: ಕೃತಕ ಬುದ್ಧಿಮತ್ತೆ ಆಧಾರಿತ ಸಾಧನವನ್ನು ಬಳಸಿಕೊಂಡು ಇತ್ತೀಚಿನ ದಿನಗಳಲ್ಲಿ ಇದರ ದುರುಪಯೋಗ ಪಡಿಸಿಕೊಳ್ಳುತ್ತಿರುವ ಘಟನೆ ನಡೆಯುತ್ತಿದೆ. ಇಂತಹ ಆತಂಕಕಾರಿ ಘಟನೆ ಇದೀಗ ಬೆಳಕಿಗೆ ಬಂದಿದೆ. ಗೋವಾ ಪ್ರವಾಸಕ್ಕೆ ಆಗಮಿಸಬೇಕೆಂದು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಯುವಕ ನೋಡುವನಿಗೆ ಆತನ ಮಿತ್ರನು ಚಾಟ್ ಜಿಪಿಟಿ ಮೂಲಕವಾಗಿ ನಕಲಿ ವಿಮಾನ ಟಿಕೆಟ್ ತಯಾರಿಸಿ ಕಳುಹಿಸಿಕೊಟ್ಟಿದ್ದ. ಆದರೆ ಈ ಕೃತ್ಯವು ವಿಮಾನ ನಿಲ್ದಾಣದಲ್ಲಿ ತಪಾಸಣೆಯ ವೇಳೆ ಬೆಳಕಿಗೆ ಬಂದಿದ್ದು ನೇರವಾಗಿ ಪೊಲೀಸ್ ಠಾಣೆಗೆ ತಲುಪಿದೆ.
ಈ ಕುರಿತಂತೆ ಲಭ್ಯವಾದ ಮಾಹಿತಿ ಅನುಸಾರ ಸೈದ್ ಎಂಬ ಯುವಕ ಗೋವಾಕ್ಕೆ ವಿಮಾನದ ಮೂಲಕ ಪ್ರಯಾಣ ಬೆಳೆಸಲು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ಈತನ ಬಳಿ ವಾಟ್ಸಪ್ ನಲ್ಲಿ ಬಂದಿದ್ದ ಈ ಟಿಕೆಟ್ ಇತ್ತು. ವಿಮಾನ ನಿಲ್ದಾಣದಲ್ಲಿ ಚೆಕ್ ಇನ್ ಸಂದರ್ಭದಲ್ಲಿ ಕರ್ಮಚಾರಿಗಳು ಟಿಕೆಟ್ ತಪಾಸಣೆ ನಡೆಸಿದಾಗ ಇದು ಅಧಿಕೃತವಾಗಿ ನೋಂದಣಿ ಆಗಿಲ್ಲ ಎಂಬುದು ಬೆಳಕಿಗೆ ಬಂತು. ಇದರಿಂದಾಗಿ ಆತನಿಗೆ ವಿಮಾನ ಪ್ರವೇಶಿಸಲು ಅವಕಾಶ ನೀಡಲಾಗಿಲ್ಲ.
ಶಾಹಿದ್ ಈತನ ಮಿತ್ರ ಅಸ್ಲಾಂ ಎಂಬ ವ್ಯಕ್ತಿಯು ಈತನ ವಯಕ್ತಿಕ ಮಾಹಿತಿ ಬಳಸಿಕೊಂಡು ಚಾಟ್ ಜಿಪಿಟಿ ಮೂಲಕವಾಗಿ ಗೋವಾದ ವಿಮಾನ ಟಿಕೆಟ್ನಂತೆಯೇ ನಕಲಿ ಟಿಕೆಟ್ ತಯಾರಿಸಿಕೊಟ್ಟಿದ್ದ. ನಂತರ ಈತನಿಗೆ ವಾಟ್ಸಪ್ ಮೂಲಕ ಕಳುಹಿಸಿ ವಿಮಾನ ಟಿಕೆಟ್ ಬುಕಿಂಗ್ ಆಗಿದೆ ಎಂದು ಹೇಳಿದ್ದ, ಇದಕ್ಕಾಗಿ ಹಿತನಿಂದ ಹಣವನ್ನು ಪಡೆದುಕೊಂಡಿದ್ದ ಎನ್ನಲಾಗಿದೆ.
ಶಾಹಿದ್ ಈತನು ವಿಮಾನ ನಿಲ್ದಾಣದಲ್ಲಿ ತನ್ನ ಟಿಕೆಟ್ ನಕಲಿ ಎಂಬುದು ಗೊತ್ತಾಗುತ್ತಿದ್ದಂತೆಯೇ ತನ್ನ ಸ್ನೇಹಿತನಿಗೆ ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ. ಆದರೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.
