ಸುದ್ದಿ ಕನ್ನಡ ವಾರ್ತೆ
ಜೊಯಿಡಾ: ಇಂದು ಜೋಯಿಡಾ ಪೊಲೀಸ್ ಠಾಣಾ ವತಿಯಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ಆಶ್ರಯದಲ್ಲಿ ಪಟ್ಟಣದಲ್ಲಿ ಮಾದಕ ವಸ್ತುಗಳ ವಿರುದ್ಧ ಸಾರ್ವಜನಿಕ ಹಾಗೂ ವಿದ್ಯಾರ್ಥಿ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ **”ಅಪರೇಷನ್ ರೈಸ್” (Operation RISE – Refuse, Inform, Support, Empower)** ಹಾಗೂ **’ಸೇ ನೋ ಟು ಡ್ರಗ್ಸ್’ (Say No to Drugs)** ಅಭಿಯಾನದಡಿಯಲ್ಲಿ ಜಾಗೃತಿ ಜಾಥಾ ಮತ್ತು ಸಭಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಬೆಳಗ್ಗೆ 11:00 ಗಂಟೆಗೆ ಬಿ.ಜಿ.ವಿ. ಎಸ್. ಕಾಲೇಜಿನಲ್ಲಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಅರಿವು ಮೂಡಿಸಲಾಯಿತು
ಈ ಕಾರ್ಯಕ್ರಮವು ಸಿಪಿಐ ಚಂದ್ರಶೇಖರ್ ಹರಿಹರ ಜೋಯಿಡಾ ವೃತ್ತ ರವರ ನೇತೃತ್ವದಲ್ಲಿ ನಡೆಯಿತು. ಜೋಯಿಡಾಪಿಎಸ್ಐ ಜಗದೀಶ್ ನಾಯ್ಕ್ ಮತ್ತು ಪೊಲೀಸ್ ಠಾಣೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಬಿ. ಜಿ. ವಿ. ಎಸ್. ಕಾಲೇಜ್ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು
ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳು ಹಾಗೂ ಮುಖ್ಯಾಂಶಗಳು:
ಮಾದಕ ದ್ರವ್ಯ ವಿರೋಧಿ ಜಾಗೃತಿ ಸಂದೇಶವುಳ್ಳ ಆಕರ್ಷಕ ‘ಸೆಲ್ಫಿ ಸ್ಟ್ಯಾಂಡ್’ ನಿರ್ಮಿಸಲಾಗಿದ್ದು, ವಿದ್ಯಾರ್ಥಿಗಳು ಹಾಗೂ ನಾಗರಿಕರು ಅತ್ಯಂತ ಉತ್ಸಾಹದಿಂದ ಸೆಲ್ಫಿ ತೆಗೆದುಕೊಂಡು ಅಭಿಯಾನಕ್ಕೆ ಬೆಂಬಲ ಸೂಚಿಸಿದರು.
2. **ಸಹಿ ಸಂಗ್ರಹಣಾ ಫಲಕ (Signature Board):**
‘ಮಾದಕ ಮುಕ್ತ ಸಮಾಜ ನಿರ್ಮಾಣ’ದ ಸಂಕಲ್ಪದೊಂದಿಗೆ ಸ್ಥಾಪಿಸಲಾಗಿದ್ದ ವಿಶಾಲ ಸಹಿ ಬೋರ್ಡ್‌ನಲ್ಲಿ ಎಲ್ಲಾ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಸಹಿ ಮಾಡಿ ತಮ್ಮ ಬೆಂಬಲವನ್ನು ದಾಖಲಿಸಿದರು.
