ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ; ಯಲ್ಲಾಪುರ ತಾಲೂಕಿನ ಹುತ್ಕಂಡ ಕ್ರಾಸ್ ಬಳಿಯ ನೂತನ ಶಿಲಾಮಯ ಕೆಂಡಾಕ್ಷಿ ಕಾಳಮ್ಮ ದೇವಾಲಯದಲ್ಲಿ ಸಂಪ್ರೋಕ್ಷಣೆ ಮಂಡಲ ಪೂಜೆ ಶೃದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ಪುರೋಹಿತರಾದ ಶ್ರೀಧರ ಭಟ್ ಮಲವಳ್ಳಿ ರವರ ಪರೌರೋಹಿತ್ಯದಲ್ಲಿ ಕಾಳಿ ದೇವಿಯ ಬಲವರ್ಧನೆ, ಕಲಾಭಿವೃದ್ಧಿ ಹೋಮ, ವಾಸುಕಿ ನಾಗರಾಜ ಹೋಮ, ಸಂಪ್ರೋಕ್ಷಣೆ ಮಂಡಲ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀದೇವಿಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ಪೂರ್ಣಗೊಂಡಿತು.
ವಿಶ್ವಕರ್ಮ ಸಮುದಾಯದವರ ಆರಾಧ್ಯ ದೇವರಾದ ಕೆಂಡಾಕ್ಷಿ ಕಾಳಮ್ಮ ದೇವಾಲಯ ಅಷ್ಟಮಂಗಲ ಜ್ಯೋತಿಷಿ ಮೈಸೂರು ಆಶಾ ಅಮ್ಮನವರ ನಿರ್ದೇಶನದಂತೆ ನಿಸರ್ಗ ಮಧ್ಯದಲ್ಲಿ ಈ ದೇವಾಲಯ ನಿರ್ಮಾಣಗೊಂಡಿದೆ.
ಶ್ರೀದೇವರ ಪ್ರತಿಷ್ಠಾಪನಾ ಮಹೋತ್ಸವದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಅಮ್ಮನವರಿಗೆ ಹಣ್ಣುಕಾಯಿ ಸೇವೆ ಸಲ್ಲಿಸಿ ಅನ್ನಪ್ರಸಾದ ಸ್ವೀಕರಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾದರು.
ಯಲ್ಲಾಪುರದ ಕಾಳಿ ಪ್ರತಿಷ್ಠಾನದ ಅರುಣ್, ಸಂತೋಷ ಬಿಕ್ಕು ಗುಡಿಗಾರ್, ಆದಿತ್ಯ ಗುಡಿಗಾರ್, ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆದವು.
