ಸುದ್ಧಿಕನ್ನಡ ವಾರ್ತೆ
ಪಣಜಿ: ಈ ಸೇತುವೆ ನಿರ್ಮಾಣದಿಂದ ಪ್ರತಿದಿನ ಗೋವಾದ ಜನರ ಅರ್ಧಗಂಟೆಯಿಂದ ಒಂದು ಗಂಟೆ ವ್ಯರ್ಥವಾಗುತ್ತಿತ್ತು, ಗೋವಾದ ಜನರ ಈ ವ್ಯರ್ಥವಾಗುವ ಸಮಯ ಉಳಿದಂತಾಗಲಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ನುಡಿದರು.
ಪರ್ವರಿಯಿಂದ ಮಾಪ್ಸಾ 5.15 ಕಿಮಿ ಉದ್ಧದ ಆರು ಪರ್ಥದ ಮೇಲ್ಸೇತುವೆ ಉಧ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಗೋವಾದ ಜನತೆ ಈ ಸೇತುವೆ ನಿರ್ಮಾಣಕ್ಕೆ ಗೋವಾದ ಜನತೆ ಸ್ಪಂಧಿಸಿದ್ದಾರೆ. ಗೋವಾದ ಜುವಾರಿ ಸೇತುವೆಯ ಮೇಲಿನ ವೇವರ್ ಗ್ಯಾಲರಿ ನಿರ್ಮಾಣಗೊಳ್ಳಲಿದೆ. ವಿದೇಶದಲ್ಲಿರುವ ಟಾವರ್ ನಂತೆಯೇ ಗೋವಾದಲ್ಲಿ ಈ ಟಾವರ್ ನಿರ್ಮಾಣಗೊಳ್ಳಬೇಕು ಎಂಬುದು ನನ್ನ ಕನಸು. ಈ ಗ್ಯಾಲರಿಯಿಂದ ಇಡೀ ಗೋವಾ ವೀಕ್ಷಿಸಬಹುದಾಗಿದೆ. ಈ ಎತ್ತರದ ಟಾವರ್ ನಲ್ಲಿ ರೆಸ್ಟೊರೆಂಟ್ ಕೂಡ ಇರಲಿದೆ ಎಂದು ಗಡ್ಕರಿ ನುಡಿದರು.
ಈ ಹೆದ್ದಾರಿ ಪಕ್ಕದಲ್ಲಿ ಆಕ್ಸಿಜನ್ ಪಾರ್ಕ ಸಿದ್ಧಪಡಿಸಬೇಕು ಎಂದು ಗೋವಾ ಸರ್ಕಾರಕ್ಕೆ ಕೇಂದ್ರ ಸಚಿವ ಗಡ್ಕರಿ ಸೂಚನೆ ನೀಡಿದರು. ಎಲ್ಲಿ ಉದ್ಯೋಗ ಸೃಷ್ಠಿಯಾಗುತ್ತದೆಯೋ ಅಲ್ಲಿ ಬಡತನ ನಿರ್ಮೂಲನೆಯಾಗಲಿದೆ. ಗೋವಾದ ರಸ್ತೆಯ ಅಭಿವೃದ್ಧಿಯು ಗೋವಾದ ಹೆಚ್ಚು ಅಭಿವೃದ್ಧಿಯಾಗಲಿದೆ. ಗೋವಾವು ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಜಲಮಾಲಿನ್ಯ ದಿಂದ ಮುಕ್ತವಾಗಬೇಕು ಎಂದು ನಿತಿನ್ ಗಡ್ಕರಿ ನುಡಿದರು.
ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್, ಕೇಂದ್ರ ಸಚಿವ ಶ್ರೀಪಾದ ನಾಯಕ್, ಸಚಿವ ದಿಗಂಬರ್ ಕಾಮತ್, ರಾಜ್ಯಸಭಾ ಸದಸ್ಯ ಸದಾನಂದ ತಾನಾವಡೆ, ಬಿಜೆಪಿ ರಾಜ್ಯಾಧ್ಯಕ್ಷ ದಾಮು ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
