ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾಕ್ಕೆ ಬರುವ ಪ್ರವಾಸಿಗರೇ ಎಚ್ಚರ….!… ಗೋವಾ ಒಂದು ಜಗತ್ಪ್ರಸಿದ್ಧ ಪ್ರವಾಸಿ ತಾಣ. ಗೋವಾಕ್ಕೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಕಳೆದ ಒಂದು ತಿಂಗಳಲ್ಲಿ ಗೋವಾಕ್ಕೆ ಪ್ರವಾಸಕ್ಕೆ ಬಂದಿದ್ದ ಸುಮಾರು 6 ಜನ ಕನ್ನಡಿಗ ಪ್ರವಾಸಿಗರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂಬುದು ಖೇದಕರ ಸಂಗತಿ. ಇದರಿಂದಾಗಿ ಪ್ರವಾಸಕ್ಕೆಂದು ಬಂದವರು ಇಲ್ಲಿ ಮೈಮರೆಯದೆಯೇ ತಮ್ಮ ತಮ್ಮ ಜೀವನ ಸುರಕ್ಷತೆಯನ್ನು ತಾವೇ ತೆಗೆದುಕೊಳ್ಳುವ ಅಗತ್ಯವಿದೆ.
ಕಳೆದ ಸುಮಾರು ಒಂದೇ ತಿಂಗಳ ಅವಧಿಯಲ್ಲಿ ಗೋವಾದ ಪ್ರಸಿದ್ಧ ದೂಧಸಾಗರ ಜಲಪಾತ, ವಜರಾ ಸಕಳಾ ಜಲಪಾತ, ಗೋವಾದ ಬಾಗಾ ಬೀಚ್, ಪ್ರವಾಸಕ್ಕೆ ಬಂದವರಲ್ಲಿ 5 ಜನ ಕರ್ನಾಟಕದ ಪ್ರವಾಸಿಗರು ನೀರಲ್ಲಿ ಮುಳುಗು ಸಾವನ್ನಪ್ಪಿದ್ದಾರೆ. ಇಷ್ಟೇ ಅಲ್ಲದೆಯೇ ಧಾರವಾಡದ ಕೋರ್ಟ ಸಿಬ್ಬಂಧಿಗಳು ಗೋವಾಪ್ರವಾಸಕ್ಕೆ ಬಂದ ಸಂದರ್ಭದಲ್ಲಿ ಕಾರು ಅಪಘಾತದಲ್ಲಿ ಒಬ್ಬರು ಜೀವ ಕಳೆದುಕೊಂಡಿದ್ದಾರೆ. ಹೀಗೆ ಗೋವಾದಲ್ಲಿ ಸರಣಿ ಅವಗಢದಲ್ಲಿ ಕನ್ನಡಿಗ ಪ್ರವಾಸಿಗರು ಸಾವನ್ನಪ್ಪಿರುವುದು ಖೇದಕರ ಸಂಗತಿ.
ಗೋವಾ ಪ್ರವಾಸಕ್ಕೆ ಬಂದ ಸಂದರ್ಭದಲ್ಲಿ ಇಲ್ಲಿ ತಮ್ಮ ಜೀವದ ಕಾಳಜಿಯನ್ನು ತೆಗೆದುಕೊಂಡು ಹೆಜ್ಜೆ ಇಡುವುದು ಉತ್ತಮ. ನೀರಿನ ಆಳದ ಅರಿವಿಲ್ಲದೆಯೇ ನೀರಿಗೆ ಇಳಿಯುವ ದುಸ್ಸಾಹಸ ಮಾಡಿದ ಪ್ರವಾಸಿಗರು ತಮ್ಮ ಜೀವ ಕಳೆದುಕೊಂಡಿದ್ದಾರೆ. ಸೆಲ್ಫಿ ಹುಚ್ಚಾಟ ಮಾಡಿ ಸಮುದ್ರ ಅಥವಾ ಜಲಪಾತದ ನೀರಿಗಿಳಿದು ತಮ್ಮ ಜೀವ ಕಳೆದುಕೊಂಡಿದ್ದಾರೆ. ಗೋವಾಕ್ಕೆ ಬರುವ ಪ್ರವಾಸಿಗರು ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ.
ಕರ್ನಾಟಕಕ್ಕೆ ಹೊಂದಿಕೊಂಡಿರುವ ಗೋವಾ ರಾಜ್ಯಕ್ಕೆ ಕರ್ನಾಟಕದಿಂದ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಇದರಿಂದಾಗಿ ತಮ್ಮ ರಜಾ ದಿನದ ಗೋವಾ ಪ್ರವಾಸ ಸುಖಕರವಾಗಿರಲಿ ಎಂಬುದು ನಮ್ಮೆಲ್ಲರ ಆಶಯ.
