ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಕನ್ನಡ ಭಾಷೆಗೆ “ಯೆಂಡು…ಗುಂಡು” ಎಂದು ವಿವಾದತ್ಮಕವಾಗಿ ನೀಡಿರುವ ಹೇಳಿಕೆಗೆ ಗೋವಾ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಗೋವಾಕ್ಕೆ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಕಳೆದ ಕೆಲ ದಿನಗಳ ಹಿಂದೆ ಆಗಮಿಸಿ ಗೋವಾ ರಾಖಣ ಯಾತ್ರೆಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಗೋವಾದ ಜುವಾರಿನಗರದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಕರ್ನಾಟಕ ಸಿಎಂ ಕನ್ನಡದಲ್ಲಿಯೇ ಭಾಷಣ ಮಾಡಿದ್ದರು.
ಈ ಕುರಿತಂತೆ ಪಣಜಿಯಲ್ಲಿ ಮಾಧ್ಯಮಗಳಿಗೆ ಪ್ರತಕ್ರಿಯೆ ನೀಡುವ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಸಾವಂತ್ -ಯಾರಾದರೂ ಗೋವಾಕ್ಕೆ ಬಂದು “ಯೆಂಡು…ಗುಂಡು….ಎಂದು ಮಾತನಾಡಿದರೆ ಅವರಿಗೆ ಮತ ಸಿಗುವುದಿಲ್ಲ. ಗೋವನ್ನರಿಗೆ ಕೊಂಕಣಿ ಚೆನ್ನಾಗಿ ಅರ್ಥವಾಗುತ್ತದೆ. ಜನತೆಗೆ ಬಿಜೆಪಿ ಮಾಡಿರುವ ಅಭಿವೃದ್ಧಿ ಕಾರ್ಯದ ಬಗ್ಗೆ ಅರಿವಿದೆ ಎಂದು ಹೇಳಿಕೆ ನೀಡಿದ್ದಾರೆ.
ಗೋವಾ ಮುಖ್ಯಮಂತ್ರಿಗಳು ಕನ್ನಡ ಭಾಷೆಗೆ ಯೆಂಡು ಗುಂಡು ಎಂದು ವಿವಾದಾತ್ಮಕವಾಗಿ ಹೇಳಿಕೆ ನೀಡಿರುವುದಕ್ಕೆ ಗೋವಾದ ಕನ್ನಡಗರಿಂದ ತೀವ್ರ ಆಕ್ರೋಷ ವ್ಯಕ್ತವಾಗುತ್ತಿದೆ. ಈ ವಿಷಯ ಗೋವಾದ ಸೋಶಿಯಲ್ ಮೀಡಿಯಾದಲ್ಲಿ ಆರಿ ಚರ್ಚೆಗೆ ಕಾರಣವಾಗಿದೆ. ಯಾವುದೇ ಒಂದು ಭಾಷೆಯನ್ನು ಹೀಗೆ ಅವಮಾನಿಸುವುದು ಸರಿಯೇ…? ಎಂಬ ಪ್ರಶ್ನೆ ಕೂಡ ಕೇಳಿಬರುತ್ತಿದೆ.
