Banner Ad

ಸುದ್ದಿ ಕನ್ನಡ ವಾರ್ತೆ

ಹೆದ್ಹಿರೇಬಾಗೇವಾಡಿ : ಕಬ್ಬಿಗೆ 5, 500 ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬುಧವಾರ ಉಗ್ರ ಹೋರಾಟ ನಡೆಸಿದರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಮಾಡಿದರು.

Banner Ad

ಮಂಗಳವಾರ ರಾತ್ರಿ ಇಡೀ 600 ಕ್ಕೂ ಹೆಚ್ಚು ರೈತರು ಟೋಲ್ ನಾಕಾದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಮೇಲೆ ಮಲಗಿದರು. ಭಜನಾ ಮಂಡಳಿಗಳು ಕೂಡ ಇದರಲ್ಲಿ ಭಾಗಿಯಾಗಿದ್ದರು. ಇಲ್ಲಿಯೇ ಊಟ ಮಾಡಿದ್ದಾರೆ.

ಬುಧವಾರ ಬೆಳಗ್ಗೆ ಮತ್ತೆ ಜಮಾವಣೆಗೊಂಡ ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು.

ದನಕರಗಳನ್ನು ತಂದು ಹೆದ್ದಾರಿಯ ಮೇಲೆ ಕಟ್ಟಿದರು ಟ್ರ್ಯಾಕ್ಟರುಗಳನ್ನು ಅಡ್ಡ ನಿಲ್ಲಿಸಿ ಸಂಚಾರ ಸಂರ್ಪೂಣ ಬಂದ್ ಮಾಡಿದರು. ಅಂಬುಲ್ಸೆನ್ಸ್ ಮತ್ತು ಶಾಲಾ, ಕಾಲೇಜು ವಿದ್ಯಾರ್ಥಿಗಳು ಸಂಚಾರಕ್ಕೆ ಒಂದು ಕಡೆ ಪೂರ್ಣರಸ್ತೆ ಬಿಟ್ಟು ಕೊಟ್ಟರು.

 

Banner Ad