Banner Ad

ಸುದ್ದಿ ಕನ್ನಡ ವಾರ್ತೆ

ಕನಕಗಿರಿ: ಶಾಲೆಯ ಸಮಯವಾದರೂ ಇಲ್ಲಿನ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಗೇಟ್ ಸೋಮವಾರ ತೆರೆಯದರ ಕಾರಣ ವಿದ್ಯಾರ್ಥಿಗಳು, ಪರಿಚಾರಕರು ಹಾಗೂ ಅತಿಥಿ ಶಿಕ್ಷಕರು ಮುಖ್ಯ ಗೇಟ್ ಬಳಿಯೇ ಕಾದು ನಿಂತಿದ್ದರು.

Banner Ad

ಶಾಲೆಯಲ್ಲಿ 9.46ಕ್ಕೆ ಪ್ರಾರ್ಥನೆ ನಡೆಯಬೇಕು. ಆದರೆ, 9.45 ಆದರೂ ಅತಿಥಿ ಶಿಕ್ಷಕರನ್ನು ಹೊರೆತು ಪಡಿಸಿ ಯಾವ ಕಾಯಂ ಶಿಕ್ಷಕರು ಶಾಲೆಗೆ ಬಂದಿರಲಿಲ್ಲ. ಮುಖ್ಯ ಶಿಕ್ಷಕ ಎಸ್ ಎಸ್ ಎಲ್ ಸಿ ಪರೀಕ್ಷೆ ಕಾರ್ಯಕ್ಕೆ ನಿಯೋಜನೆ ಗೊಂಡಿದ್ದರಿಂದ ಸಹ ಶಿಕ್ಷಕರಿಗೆ ಪ್ರಭಾರ ನೀಡಿದ್ದಾರೆ ಎನ್ನಲಾಗಿದೆ.

ಆದರೆ, ಪ್ರಭಾರಿ ಹಾಗೂ ಇತರೇ ಶಿಕ್ಷಕರು ಶಾಲೆ ಸಮಯಕ್ಕೆ ಸರಿಯಾಗಿ ಆಗಮಿಸಿ ಶಾಲೆಯ ಗೇಟ್ ಹಾಗೂ ತರಗತಿ ಕೊಠಡಿಗಳನ್ನು ತೆರೆಯಲು ಮುಂದಾಗಿಲ್ಲ. ಇದರಿಂದ 9.46 ರವರೆಗೆ ಮಕ್ಕಳು ಶಾಲೆಯ ಗೇಟ್ ಬಳಿ ಕಾಯುವಂತಾಗಿತ್ತು. 9.46ರ ಬಳಿಕ ಅತಿಥಿ ಶಿಕ್ಷಕ ಗೇಟ್ ಕೀಲಿ ತಂದು ತೆಗೆದರು. ಆ ನಂತರ ಒಬ್ಬೊಬ್ಬ ಶಿಕ್ಷಕರು ಶಾಲೆಯತ್ತ ಆಗಮಿಸುತ್ತಿರುವುದು ಕಂಡುಬಂತು.

_————-
ಸಿ ಆರ್ ಪಿ ಯೂ ಆಗಿರುವ ಅಲ್ಲಿನ ಮುಖ್ಯ ಶಿಕ್ಷಕರನ್ನು ಮೊಬೈಲ್ ಸ್ಕ್ವೇಡ್ ಆಗಿ ನಿಯೋಜನೆ ಮಾಡಲಾಗಿದೆ. ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆ ತೆರೆಯಬೇಕಿತ್ತು. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳಲಾಗುವುದು.
ಎಚ್ .ನಟೇಶ ಬಿ ಇ ಒ

Banner Ad