Banner Ad

ಸುದ್ಧಿಕನ್ನಡ ವಾರ್ತೆ
ಪಣಜಿ: ನವರಾತ್ರಿ ಆಚರಣೆಗೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ವಾದ ಉಂಟಾಗಿ ದೇವಸ್ಥಾನದ ಪರಸರದಲ್ಲಿ ಉಧ್ವಿಗ್ನ ವಾತಾವರಣ ಸೃಷ್ಠಿಯಾದ ಘಟನೆ ಗೋವಾದ ಕೇರಿಯ ಅಜೋಬಾ ದೇವಸ್ಥಾನದಲ್ಲಿ ನಡೆದಿದೆ.

 

Banner Ad

ದೇವಸ್ಥಾನದಲ್ಲಿ ದೇವಕಾರ್ಯ ನಿರ್ವಹಿಸುವಾಗ ತಹಶೀಲ್ದಾರರು ನಿಗದಿಪಡಿಸಿದ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಒಂದು ಗುಂಪು ಗಂಭೀರ ಆರೋಪ ಮಾಡಿದೆ. ಈ ಬೆಳವಣಿಗೆಯಿಂದಾಗಿ ದೇವಸ್ಥಾನದ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಲ್ಪ ಸಮಯದ ವರೆಗೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ತಹಶೀಲ್ದಾರರು ಮತ್ತು ಪೋಲಿಸರು ಸ್ಥಳಕ್ಕೆ ಆಗಮಿಸಿ ಎರಡೂ ಗುಂಪುಗಳ ನಡುವೆ ಚರ್ಚೆನಡೆಸಿ ಪರಿಸ್ಥಿತಿ ತಿಳಿಸಿಗೊಳಿಸಲು ಹೆಚ್ಚಿನ ಪ್ರಯತ್ನ ನಡೆಸಿದರು.

 

ಈ ಕುರಿತಂತೆ ಲಭ್ಯವಾದ ಮಾಹಿತಿಯ ಅನುಸಾರ ದೇವಾಲಯದಲ್ಲಿ ಧಾರ್ಮಿಕ ಆಚರಣೆಗಳು ಮತ್ತು ನವರಾತ್ರಿ ಉತ್ಸವ ಆಯೋಜನೆ ಬಗ್ಗೆ ಈಗಾಗಲೇ ಕೆಲ ನಿಯಮಗಳು ಮತ್ತು ಷರತ್ತುಗಳನ್ನು ನಿಗಧಿಪಡಿಸಲಾಗಿತ್ತು. ಆದರೆ ನವರಾತ್ರಿ ಮೊದಲ ದಿನ ಆರಂಭಗೊಂಡ ಉತ್ಸವದಲ್ಲಿ ಈ ನಿಯಮ ಪಾಲನೆಯಾಗಿಲ್ಲ ಎನ್ನಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದೆ. ಒಂದು ಗುಂಪು ದೇವಸ್ಥಾನ ಸಮೀತಿ ಬಳ ಧಾವಿಸಿ ಆಕ್ಷೇಪಣೆ ಸಲ್ಲಿಸಿತು. ನಂತರ ಈ ಘಟನೆಯಿಂದಾಗ ದೇವಸ್ಥಾನದ ಪರಿಸರದಲ್ಲಿ ಉದ್ವಿಗ್ನ ವಾತಾವರಣ ಸೃಷ್ಠಿಯಾಗಿತ್ತು. ಪ್ರಸ್ತುತ ದೇವಸ್ಥಾನ ಪರಿಸರದಲ್ಲಿ ಶಾಂತಿ ಕಾಪಾಡಿಕೊಳ್ಳಲು ಗ್ರಾದಲ್ಲಿ ಪೋಲಿಸ್ ಪಡೆಗಳನ್ನು ನಿಯೋಜಿಸಲಾಗಿದೆ. ಎರಡು ಗುಂಪುಗಳಿಗೆ ಮನವರಿಕೆ ಮಾಡಿಕೊಟ್ಟು ಪರಿಸ್ಥಿತಿ ತಿಳಿಸಿಗೊಳಿಸುವ ಕುರಿತಂತೆ ಅಧಿಕಾರಿಗಳಿಂದ ಚರ್ಚೆ ನಡೆಯುತ್ತಿದೆ.

Banner Ad