ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ಬಿಚೋಲಿಂ ಕರ್ಮಭೂಮಿ ಕನ್ನಡ ಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್ ರೆಡ್ಡಿ ರವರು 2026-27 ನೇಯ ಅವಧಿಗೆ ಬಿಚೋಲಿಂ ಸಾಮ್ರಾಟ್ ಕ್ಲಬ್ ಇಂಟರ್ ನ್ಯಾಶನಲ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕ್ಲಬ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನ ಪಡೆದುಕೊಂಡ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಅಕ್ಟೋಬರ್ 10 ರಂದು ಸಂಜೆ ಗೋವಾದ ಬಿಚೋಲಿಂ ನಲ್ಲಿ ಆಯೋಜಿಸಿದ್ದ ಕ್ಲಬ್ ನ ಸಂಸ್ಥಾಪನಾ ದಿನದಂದು ಅಧ್ಯಕ್ಷರಾದ ಹನುಮಂತಪ್ಪ ಶಿರೂರ್ ರವರೊಂದಿಗೆ ಹೊಸದಾಗಿ ಆಯ್ಕೆಯಾದ ನಿರ್ದೇಶಕ ಮಂಡಳಿ ಕೂಡ ಔಪಚಾರಿಕವಾಗಿ ತಮ್ಮ ಜವಾಬ್ದಾರಿ ವಹಿಸಿಕೊಂಡರು.
ಈ ಸಂದರ್ಭದಲ್ಲಿ ಮಯೆಮ್ ಶಾಸಕ ಹಾಗೂ ಗೋವಾ ರಾಜ್ಯ ತೋಟಗಾರಿಕಾ ನಿಗಮದ ಅಧ್ಯಕ್ಷ ಪ್ರೇಮೇಂದ್ರ ಶೇಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರದ್ದರು.
ಗೋವಾ ಸಾಮ್ರಾಟ್ ಕ್ಲಬ್ ಇಂಟರ್ ನ್ಯಾಶನಲ್ ಅಧ್ಯಕ್ಷರಾಗಿ ಕನ್ನಡಿಗ ಹನುಮಂತಪ್ಪ ಶಿರೂರ್ ರವರು ಜವಾಬ್ದಾರಿ ವಹಿಸಿಕೊಂಡಿರುವುದು ಗೋವಾ ಕನ್ನಡಿಗ ಸಮುದಾಯಕ್ಕೆ ಹೆಮ್ಮೆಯ ವಿಷಯವಾಗಿದೆ. ಈ ಸಮಾರಂಭದಲ್ಲಿ ಗೋವಾದ ವಿವಿಧ ಕನ್ನಡ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದು ನೂತನ ಅಧ್ಯಕ್ಷ ಹನುಮಂತಪ್ಪ ಶಿರೂರ್ ರೆಡ್ಡಿ ರವರಿಗೆ ಅಭಿನಂದನೆ ಸಲ್ಲಿಸಿದದರು.
ಈ ಮೂಲಕವಾಗಿ ಗೋವಾ ಸ್ಥಳೀಯರು ಮತ್ತು ಕನ್ನಡಿಗರ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿ ಎಂದು ವಿವಿಧಧ ಕನ್ನಡ ಸಂಘಟನೆಗಳು ಆಶಯ ವ್ಯಕ್ತಪಡಿಸಿವೆ.
