ಸುದ್ದಿ ಕನ್ನಡ ವಾರ್ತೆ

ಜೊಯಿಡಾ ತಾಲೂಕಿನ ಸಪ್ತಸ್ವರ ಸೇವಾ ಸಂಸ್ಥೆಯು ಉಳವಿಯಲ್ಲಿ ನಡೆದ 72 ನೇ ವನ್ಯಜೀವಿ ಸಪ್ತಾಹದಲ್ಲಿ ಜನಪದ ಕಾರ್ಯಕ್ರಮವನ್ನು ನೀಡುವ ಮೂಲಕ ಜನರಲ್ಲಿ ಜಾಗೃತಿ ತಂದಿತು. ಆಕ್ಟೋಬರ್ 2 ರಂದು ಗಾಂಧಿ ಜನಯಂತಿಯ ಅಂಗವಾಗಿ ನಡೆದ ವನ್ಯಜೀವಿ ಸಪ್ತಾಹದಲ್ಲಿ , ಬೀದಿ ನಾಟಕ ಮಾಡುತ್ತಾ ಪ್ಲಾಸ್ಟಿಕ್ ನಿಷೇಧ ನೀರಿನ ಸಂರಕ್ಷಣೆ , ಪರಿಸರ ಸಂರಕ್ಷಣೆ ಪ್ರಾಣಿ ಪಕ್ಷಿ ಸಂಕುಲಗಳ ಸಂರಕ್ಷಣೆ ಮಾಡುವ ಬಗ್ಗೆ ಸಪ್ತಸ್ವರ ಸೇವಾ ಸಂಸ್ಥೆಯ ಶ್ರೀಮತಿ ಸುಮಂಗಲಾ ದೇಸಾಯಿ ತಂಡದವರು ಉತ್ತಮ ಪ್ರದರ್ಶನ ನೀಡಿದರು.

ಉಳವಿ ಶಾಲಾ ವಿದ್ಯಾರ್ಥಿಗಳು ಕಾಳಿ ಹುಲಿ ಯೋಜನೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ನೀಲೇಶ್ ಶಿಂದೆ, ದಾಂಡೇಲಿಯ ಸ. ಅ ಸಂರಕ್ಷಣಾಧಿಕಾರಿ ಸಂಕೇತ್ ಗುಂದ ವಲಯದ ಅರಣ್ಯಾಧಿಕಾರಿ ವಿಜಯ ಕುಮಾರ್ ಮತ್ತು ಅರಣ್ಯ ಇಲಾಖೆಯ ಸಿಬ್ಬಂಧಿಗಳು ಉಪಸ್ಥಿತರಿದ್ದರು.