ಸುದ್ದಿ ಕನ್ನಡ ವಾರ್ತೆ
ಮೈಸೂರು ದಸರಾ ಆರಂಭಕ್ಕೆ ಕೆಲವೇ ದಿನ ಬಾಕಿ ಉಳಿದಿದ್ದು ಸಾಂಸ್ಕೃತಿಕ ನಾಗರಿಯಲ್ಲಿ ಭಾರಿ ಸಿದ್ಧತಾ ಕಾರ್ಯ ನಡೆಯುತ್ತಿದೆ. ಈ ನಡುವೆ ಅಪಶಕುನ ಎಂಬಂತೆ ಅರಮನೆ ಬಳಿ ಅಳವಳಿಸಿದ್ದ ದೀಪಾಲಂಕಾರ ಬೃಹತ್ ಕಟೌಟ್ ಕುಸಿದು ಬಿದ್ದಿದೆ. ಅದೃಷ್ಟವಶಾತ್ ದೊಡ್ಡ ಅನಾಹುತ ಒಂದು ತಪ್ಪಿದಂತಾಗಿದೆ.
ಮೈಸೂರು ಅರಮನೆ ಮುಂಭಾಗದ ಮಹಾವಿದ್ಯಾಪೀಠದ ಸರ್ಕಲ್ ಬಳಿ ಬೃಹತ್ ವಿದ್ಯುತ್ ದೀಪಲಂಕಾರದ ಕಟೌಟ್ ಇದ್ದಕ್ಕಿದ್ದಂತೆ ಟಿಟಿ ವಾಹನದ ಮೇಲೆ ಕುಸಿದು ಬಿದ್ದಿದೆ. ಟಿಟಿವಾಣದಲ್ಲಿ ಆಗಮಿಸಿದ್ದ ವಿದ್ಯಾರ್ಥಿಗಳು ಅರಮನೆ ವೀಕ್ಷಣೆಗೆ ತಿಳಿದ್ದರಿಂದ ಭಾರಿ ಅನಾಹುತ ತಪ್ಪಿದೆ.
ಈ ಬೃಹತ್ ಕಟೌಟ್ ಬಿದ್ದಿದ್ದರಿಂದ ಚೀಟಿ ವಾಹನ ಸಂಪೂರ್ಣ ಜಖಂಗೊಂಡಿದೆ.
ವಿಶ್ವವಿಖ್ಯಾತ ಮೈಸೂರು ದಸರಾ ಆರಂಭಕ್ಕೆ ಕೆಲವೇ ದಿನ ಬಾಕಿ ಇರುವ ಈ ಸಂದರ್ಭದಲ್ಲಿ ಇಂತಹ ದುರ್ಘಟನೆ ನಡೆದಿರುವುದು ಅಪಶಕುನ ಎಂಬಂತಾಗಿದೆ.
