ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಕಾತೇಲಿ(ಕುಂಬಾರವಾಡಾ)ಗ್ರಾಮ ಪಂಚಾಯತ ವ್ಯಾಪ್ತಿಯ ತೆಲೋಲಿಯ ಶ್ರೀ ಸಿದ್ದನಾಥ ಹಾಗೂ ಎಲ್ಲಾ ಪರಿವಾರ ದೇವತೆಗಳ ಪ್ರತಿಷ್ಠಾಪನಾ ಮಹೋತ್ಸವವು ದಿನಾಂಕ:11-04-2026 ರಿಂದ 12-04-2026 ರವರೆಗೆ ಜರುಗಲಿದೆ.
ದಿನಾಂಕ: 11-04-2026 ಬೆಳಿಗ್ಗೆ ಶನಿವಾರದಂದು ದೇವತಾ ಪ್ರಾರ್ಥನೆಯೊಂದಿಗೆ ಪ್ರತಿಷ್ಠಾಪನೆಯ ಕಾರ್ಯಕ್ರಮಗಳು ಪ್ರಾರಂಭವಾಗಲಿದೆ.
ಮರುದಿನ ಅಂದರೆ ದಿನಾಂಕ: 12-04-2026 ರ ರವಿವಾರ ಬೆಳಿಗ್ಗೆ 9:35 ಕ್ಕೆ ಶಾಲಿವಾಹನ ಶಕೆ 1948 ವೃಷಭ ಲಗ್ನ ಪರಾಭವ ನಾಮ ಸಂವತ್ಸರ ಚೈತ್ರ ಮಾಸ ಕೃಷ್ಣ ಪಕ್ಷ ದಶಮಿಯ ಶುಭದಿನದಂದು ಶುಭ ಮುಹೂರ್ತದಲ್ಲಿ ಶ್ರೀ ಸಿದ್ಧನಾಥ ಹಾಗೂ ಪರಿವಾರ ದೇವತೆಗಳ ಪ್ರತಿಷ್ಠಾಪನಾ ಕಾರ್ಯಕ್ರಮವು ಎಲ್ಲಾ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪರೋಹಿತರಾದ ‘ಶ್ರೀ ಮಹೇಂದ್ರ ಹರ್ಚಿಲಕರ’ ಜೋಯಿಡಾ ಇವರ ಅಧ್ವರ್ಯದಲ್ಲಿ ಮಧ್ಯಾಹ್ನ 12:00 ಘಂಟೆಗೆ ಪೂರ್ಣಾವಧಿಯಾಗಲಿದೆ. ನಂತರ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಮಹಾಪ್ರಸಾದ ಕಾರ್ಯಕ್ರಮ ನಡೆಯಲಿದೆ.
ಸಾಯಂಕಾಲ 5:00 ರಿಂದ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಹಾಗೂ ರಾತ್ರಿ 7:00 ರಿಂದ ಶ್ರೀ ವಿಠ್ಠಲ ದೇಸಾಯಿ ಇವೋಲಿ, ಶ್ರೀ ಸುರೇಶ ಮರಾಠಿ ಕಣ್ಣೆ, ಶ್ರೀ ಅನಂತ ಮಿರಾಶಿ ಡಿಗ್ಗಿ, ಶ್ರೀ ಪ್ರಕಾಶ ದೇಸಾಯಿ ಕರಂಜೆ, ಶ್ರೀ ನಾರಾಯಣ ದೇಸಾಯಿ ಅಖೇತಿ ಇವರ ನೇತೃತ್ವದಲ್ಲಿ ಹರಿಪಾಠ ನಡೆಯಲಿದೆ. ತದನಂತರ ರಾತ್ರಿ 8:00 ರಿಂದ 9:00 ಗಂಟೆಯವರೆಗೆ ಸವಾಲು ಕಾರ್ಯಕ್ರಮ ಇರುತ್ತದೆ. ಅದೇದಿನ ರಾತ್ರಿ 9:00 ರಿಂದ 12:00 ರವರೆಗೆ
ಹ.ಬ.ಪ|| ಶ್ರೀ. ಶಶಿಕಾಂತ ಗಾವಡೆ, ಮಹಾರಾಜ ಖಾನಾಪೂರ ಹಾಗೂ ಶ್ರೀ. ಪ್ರಜ್ವತ ಸುತಾರ ಮತ್ತು ಶ್ರೀ. ವಿಜಯ ಸುತಾರ ಅವರಿಂದ ಹರಿಕೀರ್ತನೆ ಜರುಗುತ್ತದೆ. ನಂತರ ಕಾಟೇಲ ಭಜನಾ ಮಂಡಳಿಯಿಂದ ಭಜನೆ ನಡೆಯಲಿದೆ.
ಕಾರಣ ಎಲ್ಲಾ ಭಕ್ತಾದಿಗಳು ಈ ದೇವರ ಕಾರ್ಯಕ್ಕೆ ಸಹಕುಟುಂಬ ಸಹಪರಿವಾರ ಸಮೇತ ಬಂದು ತನು-ಮನ-ಧನದ ಸಹಾಯದೊಂದಿಗೆ ಶ್ರೀ ದೇವರ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಶ್ರೀ ಸಿದ್ಧನಾಥ ದೇವಸ್ಥಾನ ಟ್ರಸ್ಟ್ ಕಮಿಟಿ ಹಾಗೂ ಊರ ನಾಗರೀಕರು ತೆಲೋಲಿ ವಿನಂತಿಸಿಕೊಂಡಿದ್ದಾರೆ.
