ಸುದ್ದಿ ಕನ್ನಡ ವಾರ್ತೆ
ಶ್ರೀ ಕ್ಷೇತ್ರ ಉಳವಿಯಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದ 72 ನೇ ವನ್ಯಜೀವಿ ಸಪ್ತಾಹಕ್ಕೆಚಾಲನೆ ನೀಡಲಾಯಿತು.ಕಾಳಿ ಹುಲಿ ಯೋಜನೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ನಿಲೇಶ ಸಿಂಧೆ ಅವರು ವೃಕ್ಷ ಮಾತೆಗೆ ಪೂಜೆ ಸಲ್ಲಿಸುವ ಮೂಲಕ ಸರಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರತಿ ವರ್ಷ ವನ್ಯ ಜೀವಿ ಸಪ್ತಾಹ ಎಲ್ಲೇ ನಡೆದರೂ ಸಾರ್ವಜನಿಕರು ಭಾಗವಹಿಸುತ್ತಿದ್ದರು ಆದರೆ ಈ ವರ್ಷ ಸ್ಥಳೀಯರು ಇಲ್ಲದೇ, ಕೇವಲ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಮತ್ತು ಉಳವಿ ಶಾಲೆಯ ಮಕ್ಕಳು ಮಾತ್ರ ಇರುವುದು ಸಾರ್ವಜನಿಕರಿಗೆ, ಯಾಕೆ ಹೀಗೆ ಎಂಬ ಅನುಮಾನ ಕಾಡಿದೆ. ಅರಣ್ಯ ಇಲಾಖೆಯ ಕಾರ್ಯಕ್ರಮದ ಉಪಯೋಗ ನಿಜವಾಗಿ ಆಗಬೇಕಾಗಿರುವುದು ಸ್ಥಳೀಯರಿಗೆ, ಅವರಿಗೆ ತಿಳಿಸದೇ ಕಾರ್ಯಕ್ರಮ ನಡೆಯಿತೇ ಅಥವಾ ಸ್ಥಳೀಯರು ಬರಲಿಲ್ಲವೇ ಎಂಬ ಅನುಮಾನ ಕಾಡಿದ್ದು ಸತ್ಯ. ಅರಣ್ಯ ಇಲಾಖೆಯ ಕಾರ್ಯಕ್ರಮ ಗಳು ಉತ್ತಮವಾಗಿರುತ್ತವೆ ಎನ್ನುವುದಕ್ಕೆ ಇಂದಿನ ಕಾರ್ಯಕ್ರಮ ಅಚ್ಚು ಕಟ್ಟಾಗಿ ನಡೆಯಿತು. ಕಾರ್ಯಕ್ರಮ ದಲ್ಲಿ ಬೀದಿ ನಾಟಕ, ಪ್ಲಾಸ್ಟಿಕ್ ಬಳಕೆಯ ನಿಷೇದ ದ ಬಗ್ಗೆ ಸಪ್ತ ಸ್ವರ ಸಂಸ್ಥೆಯ ಸದಸ್ಯರು ವಿದ್ಯಾರ್ಥಿಗಳಿಗೆ ತಿಳುವಳಿಕೆ ಮೂಡಿಸಿದರು.
ಕಾರ್ಯಕ್ರಮದ ಮೊದಲು ಉಳವಿಯ ಶ್ರೀಚನ್ನಬಸವೇಶ್ವರ ದೇವಸ್ಥಾನದಿಂದ ವೀರಭದ್ರೇಶ್ವರ ದೇವಸ್ಥಾನದ ವರೆಗೆ ವನ್ಯಜೀವಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಭವ್ಯ ಜಾತಾ ಹಾಗೂ ಮೆರವಣಿಗೆ ನಡೆಯಿತು ಈ ಸಂದರ್ಭದಲ್ಲಿ ದಾಂಡೇಲಿ ವಲಯದ ಎಸಿಎಫ್ ಸಂಕೇತ, ಗುಂದ ವಲಯ ಅರಣ್ಯಾಧಿಕಾರಿ ವಿಜಯಕುಮಾರ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
