ಸುದ್ದಿ ಕನ್ನಡ ವಾರ್ತೆ

ಜೋಯಿಡಾ  :-ಜೋಯಿಡಾ ತಾಲೂಕಾ ಕೇಂದ್ರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ರೂಂ.100ಕೋಟಿ, ಆಯುಷ್ ಮಾನ ಭಾರತದ ಆರೋಗ್ಯ ಕರ್ನಾಟಕ ಯೋಜನೆಯಡಿ ರೂಂ.4500ಕೋಟಿ, ಮಾನವ ವನ್ಯಜೀವಿ ಸಂಘರ್ಷ ತಡೆ ರೂಂ.1500 ಕೋಟಿ ಜೋಯಿಡಾ ಪ್ರವಾಸೋದ್ಯಮ ಅಭಿವೃದ್ಧಿಗೆ ರೂಂ.100ಕೋಟಿ ಮೀಸಲಿಟ್ಟು,ಮುಂದಿನ ದಿನದಲ್ಲಿ ಈ ಯೋಜನೆಯನ್ನು ಜನ ಹಿತ ದೃಷ್ಟಿಯಿಂದ ಕೈಗೊಳ್ಳಲಾಗುವುದೆಂದು ಮುಖ್ಯಮಂತ್ರಿ ಶಿಲ್ಪಾ ಮಿರಾಶಿ ಯುವ ಸಂಸತ್ ಸಭೆಯಲ್ಲಿ ತಿಳಿಸಿದರು.

ಇಂದು ಜೋಯಿಡಾ ತಾಲೂಕಾ ಕೇಂದ್ರದ ಜಗಜೀವನರಾಂ ಸಭಾ ಭವನದಲ್ಲಿ ತಾಲೂಕಾ ಆಡಳಿತ, ತಾ.ಪಂ.ಜೋಯಿಡಾ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆದ ಅಣುಕು ಸಂಸತ್ ಕಾರ್ಯಕ್ರಮದಲ್ಲಿ ಈ ಸಂಸತ್ ಕಾರ್ಯಕಲಾಪ ಕಂಡು ಬಂದಿತ್ತು.
ಬೆಳಿಗ್ಗೆ 10:30ರಿಂದ ಆರಂಭಗೊಂಡ ಜೋಯಿಡಾ ಯುಪ ಸಂಸತ್ ಕಲಾಪ ಆರಂಭದಲ್ಲಿ ಎರಡು ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ನಂತರ ಪ್ರಶ್ನೆ ವೇಳೆಯಲ್ಲಿ ತಾಲೂಕಿನ ಆರೋಗ್ಯ,ಅರಣ್ಯ, ಪ್ರವಾಸೋದ್ಯಮ, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಪ್ರಶ್ನಿಸಿದ ವಿರೋಧ ಪಕ್ಷದ ನಾಯಕರು, ತಾಲೂಕಿನ ಶಿಕ್ಷಕರ ಕೊರತೆ, ಪ್ರವಾಸೋದ್ಯಮದಲ್ಲಿ ಸ್ಥಳಿಯರ ಕಡೆಗಣನೆ, ವೈದ್ಯಾಧಿಕಾರಿ ಕೊರತೆ ಹೀಗೆ ಹಲವು ಸಮಸ್ಯೆಯ ಬಗ್ಗೆ ಪ್ರಶ್ನಿಸುತ್ತಾ, ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.
ಆರೋಗ್ಯ ವಿಷಯಕ್ಕೆ ಸಂಬಂಧಿಸಿದಂತೆ ಸಚಿವೆ ನಾದಿಯಾ ಸಯ್ಯದ್, ಅರಣ್ಯ ಇಲಾಖೆ ಸಚಿವೆ ದೀಕ್ಷಾ ವೇಳಿಪ, ಪ್ರವಾಸೋದ್ಯಮ ಸಚಿವೆ ರಿಜಿನಾ ಫರ್ನಾಂಡಿಸ್ , ಶಿಕ್ಷಣ ಸಚಿವೆ ಸುಭಾಂಗಿ ನಾಯ್ಕ, ಮುಂತಾದ. ಸಚಿವರು ಅವರವರ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿ, ಪರಿಸರ ಸಂರಕ್ಷಣೆ, ವನ್ಯಜೀವಿ ಸಂಘರ್ಷ ತಡೆಗೆ 1500ಕೋ, ಶಾಲೆಗಳಲ್ಲಿ 1500ಶಿಕ್ಷರಕ ನೇಮಕಕ್ಕೆ ಕ್ರಮ, ಪ್ರವಾಸೋದ್ಯಮ ಅಭಿವೃದ್ಧಿಗೆ 100ಕೋ, ಯೋಜನೆ ಮೀಸಲಿಟ್ಟು, ಅಗತ್ಯ ಕ್ಮಕೈಗೋಳ್ಳುತಿದ್ದಾಗಿ ಹೇಳಿದರು.
ಶೂನ್ಯ ವೇಳೆಯಲ್ಲಿ ಡಿಗ್ಗಿ ಸೇತುವೆ ಮಳೆಗಾಲದಲ್ಲಿ ಮುಳುಗುತ್ತಿದ್ದು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ತೋಂದರೆಗೀಡಾಗುತಿದ್ದಾರೆ ನೀವೇನು ಕ್ರಮ ವಹಿಸಿದ್ದಿರಿ ಎನ್ನುವ ವಿರೋಧ ಪಕ್ಷದ ಪ್ರಶ್ನೆಗಳಿಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಪ್ರಕೃತಿ ವಿಕೋಪ, ನೈಸರ್ಗಿಕ ಸಮಸ್ಯೆಗೆ ಸಂಬಂಧಿಸಿದಂತೆ ಜನರು ರಕ್ಷಣೆಗೆ ಕ್ರಮ ಕೈಗೊಂಡಿದ್ದು,ಪ್ರವಾಹ ಪೀಡಿತ ಜನರಿಗಾಗಿ 24 ಗಂಟೆಗೂ. ಸಹಾಯವಾಣಿ ತೆರೆಯಲಾಗಿದೆ. ಸೇತುವೆಯು ನಿರ್ಮಾಣಕ್ಕೆ ರೂ. 60 ಕೋಟಿ ಅನುದಾನ ಬಿಡುಗಡೆ ಗೊಳಿಸಿದ್ದಾಗಿ ಸಭೆಗೆ ತಿಳಿಸಿದರು.

ಕೊನೆಯಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ವಿಧೇಯಕ ಮಂಡನೆಗೆ ಸಂಬಂಧಿಸಿದಂತೆ ವಿರೋಧ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕರು, ಪ್ರವಾಸೋದ್ಯಮ ನಮಗೆ ಬೇಡ, ಇದರಿಂದ ಬೇರೆಯವರು ಲಾಭ ಪಡೆಯುತಿದ್ದು, ನಮಗೆ ನೈಸರ್ಗಿಕ ಕಾಡು ಬೇಕು ಎನ್ನುವ ಹಠಕ್ಕೆ ಬಿದ್ದು, ಸಧನದ ಬಾವಿಗೆ ಇಳಿದ್ದು ವಿಧೇಯಕ ಮಂಡನೆಗೆ ವಿರೋಧಿಸಿದರು. ನಂತರ ವಿರೋಧ ಪಕ್ಷದ ನಾಯಕರನ್ನು ಹೋರಹಾಕಲಾಗಿ, ಸಭೆಯಲ್ಲಿ ವಿಧೇಯಕ ಮಂಡನೆ ಮಾಡಲಾಯಿತು. ನಂತರ ಸಭೆಯನ್ನು ಅನಿರ್ದಿಷ್ಟಾವಧಿಯ ವರೆಗೆ ಮುಂದೂಡಿಕೆ ಮಾಡಲಾಯಿತು.
ರಾಷ್ಟ ಗೀತೆಯೊಂದಿಗೆ ಸದನ ಕೊನೆಗೊಂಡಿತು. ವಿದ್ಯಾರ್ಥಿಗಳಿಗೆ ತರಬೇತಿದಾರರಾಗಿ ಉಪನ್ಯಾಸಕ ಶಿವಾಜಿ ಜೋಮನ್ನವರ, ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಶಿವಾನಂದ, ಕುಬಾರವಾಡಾ ಕಾಲೇಜು ಉಪನ್ಯಾಸಕಿ ಸಂಪೂರ್ಣ ರವರು ತಹಶೀಲ್ದಾರ ಮಂಜುನಾಥ ಮುನ್ನೋಳ್ಳಿ, ತಾ.ಪಂ. ಕಾ.ನಿ.ಅಧಿಕಾರಿ ಭಾರತಿ ಎನ್. ಬಿ.ಇ.ಓ. ಪ್ರಶಾಂತ್ ನಾಯಕ, ಸಮಾಜಕಲ್ಯಾಣ ಅಧಿಕಾರಿ ವಾಸಂತಿ ಗೌಡ, ರವರ ಮಾರ್ಗದರ್ಶನದಲ್ಲಿ ತರಬೇತಿ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಯುವ ಸಂಸತ್ ನಲ್ಲಿ. ಡಿಗ್ರಿ ಕಾಲೇಜು, ಬಿ.ಜಿ.ವಿ.ಎಸ್.ಪಿ.ಯು ಕಾಲೇಜು, ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.