ಸುದ್ದಿ ಕನ್ನಡ ವಾರ್ತೆ
ಅಡಿಕೆ ತೋಟಕ್ಕೆ ಕನ್ನ ಹಾಕಿದ ಕಳ್ಳರು ತೋಟದಲ್ಲಿದ್ದ ಸುಮಾರು 3 ಕ್ವಿಂಟಲ್ ಗೂ ಹೆಚ್ಚು ಅಡಿಕೆಯನ್ನು ದೋಚಿ ಪರಾರಿಯಾದ ಘಟನೆ ಶಿರಸಿ ತಾಲೂಕಿನ ಕಾಳಂಗಿ ಗ್ರಾಮದಲ್ಲಿ ನಡೆದಿದೆ.

ಈ ಘಟನೆಯು ಅಡಿಕೆ ಬಳೆಗಾರರನ್ನು ಬೆಚ್ಚಿ ಬೀಳಿಸಿದೆ. ಅಡಿಕೆ ಕಳ್ಳತನ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಅಡಿಕೆಗೆ ದರ ಹೆಚ್ಚಿರುವುದರಿಂದ ಅಡಿಕೆಯನ್ನು ಕಾಯ್ದುಕೊಳ್ಳುವುದೇ ರೈತರಿಗೆ ದೊಡ್ಡ ಸವಾಲಾಗಿದೆ.

ಕಾಳಂಗಿ ಗ್ರಾಮದ ಶಿವಯೋಗಿ ಬಾಳಿಕಾಯಿ ಮಠ ರವರ ತೋಟದಲ್ಲಿ ಈ ಕಳ್ಳತನ ನಡೆದಿದೆ. ತೋಟಕ್ಕೆ ಅಳವಡಿಸಿದ್ದ ಗೇಟ್ ನ ಬೀಗ ಮುರಿದು ಹಾಗೂ ತಂತಿಬೇಲಿಯನ್ನು ಬಗ್ಗಿಸಿ ಅಡಿಕೆ ತೋಟದಲ್ಲಿ ಸುಮಾರು 30 ರಿಂದ 40 ಹಸಿ ಅಡಿಕೆ ಕೊನೆಗಳನ್ನು ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದಾರೆ. ಕಳ್ಳತನವಾಗಿರುವ ಅಡಿಕೆ ಸುಮಾರು 3 ಕ್ವಿಂಟಲ್ ಗುಹೆಚ್ಚಿದೆ ಎಂದು ಅಂದಾಜಿಸಲಾಗಿದೆ.

ಅವರು ಬನವಾಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.