ಸುದ್ದಿ ಕನ್ನಡ ವಾರ್ತೆ
ಬೆಂಗಳೂರು: ಕೃತಕ ಬುದ್ಧಿಮತ್ತೆ ಎಐ ಆಧಾರಿತ ಸಂಚಾರ ಸುರಕ್ಷತೆಗೆ ಸಂಬಂಧಿಸಿದ ಕುತೂಹಲಕಾರಿ ಘಟನೆ ಬೆಳಕಿಗೆ ಬಂದಿದೆ. ಬೆನ್ನಿಗೆ ಗಿಟಾರ್ ಕಟ್ಟಿಕೊಂಡಿದ್ದ ಕ್ಕಾಗಿ ವ್ಯಕ್ತಿಯೊಬ್ಬರಿಗೆ 500 ದಂಡ ವಿಧಿಸಿದ ಬಗ್ಗೆ ವರದಿಯಾಗಿದೆ.
ಸೌವಿಕ್ ದತ್ತ ಎಂಬ ವ್ಯಕ್ತಿ ಬೆಂಗಳೂರಿನಲ್ಲಿ ತನ್ನ ಪತ್ನಿಯ ಸ್ಕೂಟರ್ನಲ್ಲಿ ಒಬ್ಬಂಟಿಯಾಗಿ ಪ್ರಯಾಣಿಸುತ್ತಿದ್ದ. ಪ್ರಾಣ ಸಮಯದಲ್ಲಿ ಅವರು ಸುರಕ್ಷತಾ ಮುನ್ನೆಚ್ಚರಿಕೆಯಾಗಿ ಹೆಲ್ಮೆಟ್ ಧರಿಸಿದ್ದರು. ಅವರು ಬೆನ್ನಿಗೆ ಗಿಟಾರ್ ಬ್ಯಾಗ್ ಹಾಕಿಕೊಂಡಿದ್ದರು. ರಸ್ತೆಯಲ್ಲಿದ್ದ ಎಐ ಚಾಲಿತ ಸ್ವಯಂ ಚಾಲಿತ ಸಂಚಾರ ಕ್ಯಾಮೆರಾ ಅವರ ಈ ಚಿತ್ರವನ್ನು ಸೆರೆಹಿಡಿದಿದೆ. ಆದರೆ ಈ ತಂತ್ರಜ್ಞಾನವು ದೊಡ್ಡ ಗೊಂದಲವನ್ನು ಸೃಷ್ಟಿಸಿದೆ. ಹಿಂಭಾಗದಲ್ಲಿರುವ ಗಿಟಾರನ್ನು ಎಐ ಕ್ಯಾಮೆರಾ ಗುರುತಿಸಿಲ್ಲ ಆದ್ದರಿಂದ ಕ್ಯಾಮೆರಾ ಗಿಟಾರನ್ನು ಹಿಂಬದಿ ಸವಾರ ಎಂದು ಗುರುತಿಸಿಕೊಂಡು ಹಿಂಬದಿ ಸವಾರರಿಗೆ ಹೆಲ್ಮೆಟ್ ಇಲ್ಲ ಎಂಬ ಕಾರಣಕ್ಕಾಗಿ ಕ್ಯಾಮರಾ ತಪ್ಪಾಗಿ ತಿಳಿದು ದಂಡ ವಿಧಿಸಿದೆ ಎನ್ನಲಾಗಿದೆ.
ಸೋವಿಕ್ ದತ್ತ ರವರ ಪತ್ನಿ ಹೆಸರಿನಲ್ಲಿ 500 ಈ ಚಾನಲ್ ನೀಡಲಾಗಿದೆ. ಈ ಘಟನೆಯಿಂದ ಆಘಾತಕ್ಕೊಳಗಾದ ಅವರು ಎಐ ಕ್ಯಾಮೆರಾ ತೆಗೆದ ಫೋಟೋ ಮತ್ತು ಚಾನೆಲ್ ರಶೀದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಈ ಘಟನೆ ಬೆಳಕಿಗೆ ಬಂದ ನಂತರ ಬೆಂಗಳೂರು ಸಂಚಾರ ಪೊಲೀಸರು ಈ ವಿಷಯವನ್ನು ಗಮನಕ್ಕೆ ತೆಗೆದುಕೊಂಡರು. ಪೊಲೀಸರು ಸೋವಿಗ್ ದತ್ತ ರವರನ್ನು ಇಮೇಲ್ ಮೂಲಕ ಸಂಪರ್ಕಿಸಿ ಚಾನೆಲ್ ರದ್ದತಿಗೆ ಅರ್ಜಿ ಸಲ್ಲಿಸುವಂತೆ ಕೇಳಿಕೊಂಡಿದ್ದಾರೆ.
