ಸುದ್ದಿ ಕನ್ನಡ ವಾರ್ತೆ

ದೆಹಲಿ: ​ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (DUSU) 2026ರ ಚುನಾವಣಾ ಫಲಿತಾಂಶ ಇದೀಗ  ಪ್ರಕಟವಾಗಿದ್ದು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಭರ್ಜರಿ ಗೆಲುವು ಸಾಧಿಸಿದೆ.

ಒಟ್ಟು 4 ಮುಖ್ಯ ಹುದ್ದೆಗಳ ಪೈಕಿ 3 ಸ್ಥಾನಗಳನ್ನು ABVP ತನ್ನದಾಗಿಸಿಕೊಂಡರೆ, ಉಪಾಧ್ಯಕ್ಷ ಸ್ಥಾನವನ್ನು ಪಕ್ಷೇತರ ಅಭ್ಯರ್ಥಿ ಗೆದ್ದುಕೊಂಡಿದ್ದಾರೆ.

​ವಿಜೇತರ ವಿವರಗಳು ಈ ಕೆಳಗಿನಂತಿವೆ:

​ಅಧ್ಯಕ್ಷರು: ಯಶ್ ದಾಬಸ್ (ABVP)

​ಕಾರ್ಯದರ್ಶಿ: ರಿಯಾ ಛಾವ್ಡಿ (ABVP)

​ಜಂಟಿ ಕಾರ್ಯದರ್ಶಿ: ಲಕ್ಷ್ಮಣ್ ರಾಜ್ ಸಿಂಗ್ (ABVP)

​ಉಪಾಧ್ಯಕ್ಷರು: ದೀಪಾಂಶು ಶೋಕೀನ್ (ಪಕ್ಷೇತರ ಅಭ್ಯರ್ಥಿ)

​ಸೆಪ್ಟೆಂಬರ್ 18 ರಂದು ನಡೆದ ಮತದಾನದ ನಂತರ, ಸೆಪ್ಟೆಂಬರ್ 19 ರಂದು 20 ಸುತ್ತುಗಳ ಮತ ಎಣಿಕೆ ನಡೆಸಿ ಈ ಫಲಿತಾಂಶವನ್ನು ಘೋಷಿಸಲಾಗಿದೆ.