ಸುದ್ದಿ ಕನ್ನಡ ವಾರ್ತೆ
ಜೊಯಿಡಾ ತಾಲೂಕಿನಲ್ಲಿ ಸಾವಯವ ರೈತರು ಕಳೆದ ಹತ್ತು ವರ್ಷಗಳಿಂದ ಸುಭೀಕ್ಷ ಸಾವಯವ ಸಹಕಾರಿ ಸಂಸ್ಥೆಯಲ್ಲಿ ತೊಡಗಿಸಿಕೊಂಡಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡುವ ಇಂಗಿತ ಹೊಂದಿದ್ದಾರೆ.
ಕರ್ನಾಟಕ ಮತ್ತು ಕೇರಳ ರಾಜ್ಯದ ಕಾರ್ಯ ಕ್ಷೇತ್ರ ಹೊಂದಿರುವ ಸುಬೀಕ್ಷಾ ಸಂಸ್ಥೆ ಒಟ್ಟು 5100 ಷೇರುದಾರ ಸದಸ್ಯರನ್ನು ಹೊಂದಿದ್ದು , ಶಿವಮೊಗ್ಗದ ತೀರ್ಥಹಳ್ಳಿ ಯಲ್ಲಿ ಪ್ರಧಾನ ಕಚೇರಿ ಹೊಂದಿದೆ. ಈ ಸಂಸ್ಥೆಯು ಸಾವಯವ ರೈತರು ಮತ್ತು ಸಾವಯವ ದತ್ತ ರೈತರು ಎಂಬ ಪ್ರಮುಖವಾದ ವಿಷಯದಲ್ಲಿ ರೈತರ ಅಭಿವೃದ್ಧಿ ಯತ್ತ ಗಮನ ಹರಿಸಿದೆ. ರೈತರ ವಿವಿಧ ಸಮಸ್ಯೆಗಳ ಅಧ್ಯಯನ ನಡೆಸಿದೆ. ರೈತರ ಭೂಮಿಯ ಜಿಪಿಎಸ್ ಪ್ರಕ್ರಿಯೆಯಿಂದ ಮಣ್ಣಿನ ವಿವಿಧ ಗುಣಧರ್ಮ ಗಳನ್ನು ಕಂಡು ಕೊಳ್ಳಲಾಗುತ್ತಿದೆ,ಜೊತೆಗೆ ಮುಂದಿನ ದಿನಗಳಲ್ಲಿ ರೈತರಿಗೆ ಕಡಿಮೆ ದರದಲ್ಲಿ ಉತ್ತಮ ಸಾವಯವ ಗೊಬ್ಬರ, ಪೂರ್ಣ ಮತ್ತು ಸಂಪೂರ್ಣ, ತಯಾರಿಕಾ ಹಂತದಲ್ಲಿದೆ. ಯೂರಿಯಾ, ಮತ್ತು ವಿಷಮುಕ್ತ ಬತ್ತ , ರಾಗಿ ಬೆಳೆ ಬೆಳೆಯುತ್ತಿದ್ದು ಮುಂದಿನ ದಿನಗಳಲ್ಲಿ ರಾಗಿ ಬೆಳೆಯುವರಿಗೆ ಪ್ರೋತ್ಸಾಹ ನೀಡುವುದು ರಾಜ್ಯದಲ್ಲಿ ರಾಗಿ ಬೆಳೆಯ ಪ್ರಮಾಣ ಹೆಚ್ಚಿಸುವುದು ನಡೆದಿದೆ.ಎಂದು ರಾಜ್ಯಧ್ಯಕ್ಸಆನಂದ, ಪಿ, ಹೇಳಿದರು.
ಈಗಾಗಲೇ ರೂ.ಐದು ಕೋಟಿಯ ರಾಗಿ ಖರೀದಿಸಿ ಬೆಂಗಳೂರಿನ ಸತ್ಯ ಸಾಯಿ ಸಂಸ್ಥೆಗೆ ನೀಡಲಾಗಿದೆ. ಈ ಸಂಸ್ಥೆ ರಾಜ್ಯದಲ್ಲಿನ ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ನೀಡುತ್ತಿದ್ದು ಇದು ಸಂಸ್ಥೆಯ ಹೆಮ್ಮೆಯ ಸಾಧನೆಯಾಗಿದೆ.
ಜೊಯಿಡಾ ತಾಲೂಕಿನಲ್ಲಿರುವ 73 ಸದಸ್ಯ ಷೇರುದಾರರಿಗೆ ಇಂದು ಸಮೃದ್ಧಿ ಸಂಸ್ಥೆಯ ತಲಾ ನಾಲ್ಕು ಬುಟ್ಟಿಗಳನ್ನು ಡಿವಿಡೆಂಡ್ ರೂಪದಲ್ಲಿ ಸಂಸ್ಥೆಯ ಗಣ್ಯರು ನೀಡಿದರು.
ಸಂಸ್ಥೆಯಲ್ಲಿ ಸಾಲ ನೀಡುವ ಪದ್ಧತಿ ಇಲ್ಲ. ಠೇವಣಿ ಇಡುವ ಪದ್ಧತಿ ಇಲ್ಲ. ಸದಸ್ಯರ ಷೇರು ಬಾಂಡವಲು ಬಳಸಿ ವ್ಯವಹಾರ ಮಾಡಲಾಗುತ್ತಿದೆ.ಎಂದು ಗಣ್ಯರು ಮಾಹಿತಿ ನೀಡಿದರು, ಸಂಸ್ಥೆಯ ಬೆಳವಣಿಗೆ ಕುರಿತು ಸಾಕಷ್ಟು ಚರ್ಚೆ ಗಳು ನಡೆದವು.
ಈ ಸಂದರ್ಭದಲ್ಲಿ ಸುಬೀಕ್ಷಾ ಸಂಸ್ಥೆಯ ತಾಲೂಕಾ ಅಧ್ಯಕ್ಷ ಎನ್.ವಿ.ಹೆಗಡೆ ನಂದಿಗದ್ದಾ ಸೇವಾ ಸಹಕಾರಿ ಸಂಸ್ಥೆಯ ಅಧ್ಯಕ್ಷ ಆರ್.ವಿ.ದಾನಗೇರಿ , ಗ್ರಾಪಂ ಮಾಜಿ ಅಧ್ಯಕ್ಷ ಅರುಣ್ ದೇಸಾಯಿ , ಗಣ್ಯರಾದ ಎಸ್. ಟಿ ದಾನಗೇರಿ ,ಸಂಸ್ಥೆಯ ಕಾರ್ಯದರ್ಶಿ ಶಾಂತರಾಮ್ ಕಾಮತ್, ಖಜಾಂಚಿ ಸಂದೀಪ ಗಾವಡಾ ಮತ್ತು ಸುಬೀಕ್ಷಾ ಸಂಸ್ಥೆಯ, ಬಾಸ್ಕರ ಹೆಗಡೆ,ದತ್ತಾತ್ರೇಯ ಹೆಗಡೆ ಸಂಸ್ಥೆಯ ಸದಸ್ಯರು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
