Banner Ad

ಸುದ್ದಿ ಕನ್ನಡ ವಾರ್ತೆ

ಜೊಯಿಡಾ: ರಾಜ್ಯ ಸರ್ಕಾರ ಕೊಡಮಾಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ.. 2024-25 ಸಾಲಿಗಾಗಿ ತಾಲೂಕಾ ಮಟ್ಟದ ಈ ಪ್ರಶಸ್ತಿ ಗೆ ಜೋಯ್ದ ತಾಲೂಕಿನಿಂದ ಉಳವಿ ಗ್ರಾಮ ಪಂಚಾಯ್ತಿ ಆಯ್ಕೆ ಆಗಿದೆ.

Banner Ad

ಗ್ರಾಮ ಪಂಚಾಯತ್ ಉತ್ತಮ ಕಾರ್ಯ ನಿರ್ವಹಣೆ ಗಾಗಿ ನೀಡುವ ಈ ಪ್ರಶಸ್ತಿ ಬರಲು.ಶಾಸಕ ಆರ್, ವಿ ದೇಶಪಾಂಡೆ ಅವರ ಸಹಕಾರ ಮಾರ್ಗದರ್ಶನ,ಉಳವಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಮಸ್ತ ನಾಗರಿಕರ ಸಾಹಕಾರ ಹಾಗೂ ಉಳವಿ ಚನ್ನಬಸವಶ್ವರ ಟ್ರಸ್ಟ್ ಕಮಿಟಿಯವರ ಸಹಕಾರ ಹಾಗೂ ಪಂಚಾಯತ್ ಅಭಿವೃದ್ಧಿಗೆ ಕಾಲ ಕಾಲ ಕ್ಕೆ ಸಲಹೆ, ಮಾರ್ಗದರ್ಶನ್ ನೀಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹನಾಧಿಕಾರಿಗಳು, ಜಿ, ಪಂ, ಉಪ ಕಾರ್ಯದರ್ಶಿಗಳು, ತಾಲೂಕು ಪಂಚಾಯತಿ ಕಾರ್ಯನಿರ್ವಾಹನಾಧಿಕಾರಿ, ಹಾಗೂ ಉಳವಿ ಗ್ರಾಮ ಪಂಚಾಯತ್ ಹಿಂದಿನ ಅಭಿವೃದ್ಧಿ ಅಧಿಕಾರಿ ಮಹಮ್ಮದ್ ಹನಿಪ್ ಹಾಗೂ ಈಗಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದತ್ತಾತ್ರೇಯ್ ಚಂಬಾರ್. ಮತ್ತು ಇವರ ಜೊತೆಯಲ್ಲಿ ಉಳಿದ ಸಿಬ್ಬಂದಿಗಳು ಸಾಯಿಸ್ತಾ ಅಲಿ ಖಾನ್, ಲತೀಪ್ ಗಾಪುರ್ ಶೇಕ್, ರಾಜೆಶ್ ಕಡಪೋಡ್ಕರ್, ಅಸಿಫ್ ಸಯ್ಯದ್, ರಫೀಕ್ ಮುಲ್ಲಾ, ಮಾದೇವ ಹರಿಜನ, ಸುರೇಂದ್ರ ಮಾಸನೆ, ಮತ್ತು ಈ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಗ್ರಾಮ ಪಂಚಾಯತ್ ಸದಸ್ಯರಾದ ಉಪಾಧ್ಯಕ್ಷರು ಆಗಿದ್ದ ಮಂಗಳ ಮೀರಾಶಿ, ಮಂಜುಳಾ ವಸ್ತ್ರದ, ಅಬ್ದುಲ್ ಜೂಬೇರ ಶೇಖ, ಲಕ್ಷ್ಮಿ ಸಿದ್ದಿ, ಡಿ ಆರ್ ಗೌಡ,ವಿಷ್ಣ್ಣು ಬಿರಂಗತ, ಸಂಜೀವಿನಿ ಕಾಂಬ್ಳೆ, ಇವರ ಸಹಕಾರದಿಂದ ಪಂಚಾಯತಿಗೆ ಈ ಪ್ರಶಸ್ತಿ ಲಭಿಸಲು ಸಾಧ್ಯವಾಗಿರುತ್ತದೆ. ಇದಕ್ಕಾಗಿ ಎಲ್ಲರನ್ನು ಅಭಿನಂದಿಸುತ್ತೆನೆ. ಎಂದು ಉಳವಿ ಗ್ರಾಮ ಮಂಚಾಯತ್ ಹಿಂದಿನ ಅಧ್ಯಕ್ಷ ಮಂಜುನಾಥ್ ಮೊಖಾಶಿ ಸಂತಸ ವ್ಯಕ್ತಪಡಿಸಿದ್ದಾರೆ.

Banner Ad