ಸುದ್ದಿ ಕನ್ನಡ ವಾರ್ತೆ
ಸ್ವಾತಂತ್ರ್ಯ ಸಂಗ್ರಾಮದ ಜೀವನಾಡಿಯಾಗಿ ಕೋಟ್ಯಂತರ ಭಾರತೀಯರಲ್ಲಿ ದೇಶಭಕ್ತಿಯ ಕಿಚ್ಚು ಹೊತ್ತಿಸಿದ್ದ ಪವಿತ್ರ ‘ವಂದೇ ಮಾತರಂ’ ಗೀತೆಯನ್ನು ಮೊಟಕುಗೊಳಿಸಿ, ಕೇವಲ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕೆಂದು ಆದೇಶಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮ ಅತ್ಯಂತ ನಾಚಿಕೆಗೇಡು ಹಾಗೂ ಅಕ್ಷಮ್ಯ ಅಪರಾಧ.ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಸ್ಪಷ್ಟ ಆದೇಶ ಹಾಗೂ ಮಾರ್ಗಸೂಚಿಗಳು ಇದ್ದಾಗ್ಯೂ ಅದನ್ನು ಉಲ್ಲಂಘಸಿ, ತನ್ನ ಅನುಕೂಲಕ್ಕೆ ತಕ್ಕಂತೆ ದುರ್ಬಳಕೆ ಮಾಡಿಕೊಂಡು ರಾಷ್ಟ್ರದ ಹೆಮ್ಮೆಯ ಗೀತೆಗೆ ಕತ್ತರಿ ಹಾಕಿರುವುದು ಸರ್ಕಾರದ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ. ಕೇವಲ ಓಲೈಕೆ ಮತ್ತು ಕ್ಷುಲ್ಲಕ ಮತಬ್ಯಾಂಕ್ ರಾಜಕಾರಣಕ್ಕಾಗಿ ತಾಯಿ ಭಾರತಿಯ ಸ್ತುತಿಯನ್ನೇ ತುಂಡರಿಸುವ ಮೂಲಕ ಕಾಂಗ್ರೆಸ್ ತನ್ನ ವಿಕೃತ ದೇಶವಿರೋಧಿ ಮನಸ್ಥಿತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ದೇಶದ ಅಸ್ಮಿತೆ, ಏಕತೆ ಮತ್ತು ಹುತಾತ್ಮರ ತ್ಯಾಗ-ಬಲಿದಾನಗಳ ಸಂಕೇತವಾಗಿರುವ ರಾಷ್ಟ್ರೀಯ ಗೀತೆಗೆ ಅಪಮಾನ ಮಾಡುವ ಯಾವುದೇ ಅಧಿಕಾರ ಈ ಸರ್ಕಾರಕ್ಕಿಲ್ಲ. ನಾಡಿನ ದೇಶಪ್ರೇಮಿಗಳ ಸ್ವಾಭಿಮಾನವನ್ನು ಕೆಣಕಿರುವ ಈ ನಿರ್ಧಾರವನ್ನು ರಾಜ್ಯ ಸರ್ಕಾರ ಯಾವುದೇ ಷರತ್ತಿಲ್ಲದೆ ಕೂಡಲೇ ಹಿಂಪಡೆಯಬೇಕು.ಎಂದು
ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದರು ಹೇಳಿದ್ದಾರೆ.
