ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ದೇಶದ ಗಡಿ ಕಾಯುವಲ್ಲಿ ಸೈನಿಕರ ಪಾತ್ರ ಮಹತ್ತರವಾಗಿದ್ದು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಸೈನಿಕರ ಬಲಿದಾನವನ್ನು ನಾವೆಂದಿಗೂ ಮರೆಯಬಾರದು ಎಂದು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಸಂತೋಷ ಸಾವಂತ ಹೇಳಿದರು.
ಅವರು ತಾಲೂಕಿನ ಜೋಯಿಡಾದಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಸುಪಾ ಗ್ರೇಟ್ ವಾರಿಯರ್ಸ್ ಮಾಜಿ ಸೈನಿಕರ ಸಂಘ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಅತ್ಯಂತ ಗೌರವಪೂರ್ವಕವಾಗಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಸೈನಿಕರು ಕಾರ್ಗಿಲ್ ಯುದ್ಧದ ಹಾಗೂ ಭಾರತೀಯ ಸೇನೆಯ ಶೌರ್ಯವನ್ನು ಸ್ಮರಿಸಿದರು. ಇದೇ ಸಂದರ್ಭದಲ್ಲಿ ದೇಶಕ್ಕಾಗಿ ಹುತಾತ್ಮರಾದ ಸೈನಿಕರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಜೋಯಿಡಾ ಪಿ ಎಸ್‌ಐ ಜಗದೀಶ್ ನಾಯ್ಕ,ಜಿ.ಪಂ ಜೆಇಇ ಪ್ರವೀಣಕುಮಾರ,ಉಪ ತಹಶಿಲ್ದಾರರ ಸಂಜೀವ ಭಜಂತ್ರಿ ಶಿಕ್ಷಣ ಇಲಾಕೆಯ ಸಂತೋಷ ಸಾವಂತ, ಎನ್‌ಸಿಸಿ (NCC) ಕೆಡೆಟ್‌ಗಳು ವಿವಿಧ ಇಲಾಖೆಯ ಅಧಿಕಾರಿಗಳು ಶಿಕ್ಷಕರು ಕಾಲೇಜಿನ ಪ್ರಾಚಾರ್ಯರು ಗಳು ಹಿರಿಯರಾದ ಮನೋಹರ್ ದೇಸಾಯಿ ಸೇರಿದಂತೆ ಹಲವು ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
