ಸುದ್ದಿ ಕನ್ನಡ ವಾರ್ತೆ
ಜೋಯಡಾದ ಗೋವಿಂದ ನಾಯ್ಕ್ ಎಂಬುವರ ಮೃತ್ಯು ನಂತರ ಅನಗತ್ಯವಾಗಿ ಎಮ್ಎಲ್ಸಿ ಮಾಡಿ ಶವ ಹಸ್ತಾಂತರದ ಪ್ರಕ್ರಿಯೆಗೆ ಉದ್ದೇಶ ಪೂರ್ವಕವಾಗಿ ವಿಳಂಬ ಮಾಡಿದನ್ನು ಕಾಳಿ ಬ್ರಿಗೇಡ್ ಖಂಡಿಸುತ್ತದೆ. ಜೋಯಡಾ ತಾಲ್ಲೂಕಿನ ಗುಡ್ಡಗಾಡು ಪ್ರದೇಶದ ಮುಡಯೆ ಹಳ್ಳಿಯ ಗೋವಿಂದ ನಾಯ್ಕ್ ಹೊಟ್ಟೆ ನೋವಿನಿಂದ ಬಳಲುತ್ತಿದ್ದು ದಾಂಡೇಲಿ ಯ ಸರಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತ ಇದ್ದರು. ಅಲ್ಲಿ ಗುಣಮುಖ ಆಗದೆ ಹೆಚ್ಚಿನ ಚಿಕಿತ್ಸೆ ಗಾಗಿ ಕಾರವಾರದ ಕ್ರೀಮ್ಸ್ ಆಸ್ಪತ್ರೆ ಗೆ ದಾಖಲಿಸಲಾಗಿ,ಚಿಕಿತ್ಸೆ ಫಲಕಾರಿ ಆಗದೆ ಮರಣ ಹೊಂದಿರುತ್ತಾರೆ.
ರೋಗಿ ಹೊಟ್ಟೆ ನೋವಿನಿಂದ ಗ್ರಸ್ತ ನಾಗಿದ್ದು, ಸರಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದಿದ್ದರಿಂದ ಸಹಜ ಪ್ರಕ್ರಿಯೆ ಮುಗಿಸಿ ಶವ ಅವರ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಬೇಕಾಗಿತ್ತು. ಆದರೂ ಅಲ್ಲಿರುವ ವೈದ್ಯರು ಅಥವಾ ಸಿಬ್ಬಂದಿಗಳು ಪೂರ್ವಾಗ್ರಹ ಹೊಂದಿ ಉದ್ದೇಶಪೂರ್ವಕವಾಗಿ ಎಮ್ ಎಲ್ ಸಿ ಮಾಡಿ, ದೂರದ ಜೋಯಡಾ ದಿಂದ ಪೋಲಿಸರನ್ನು ಕರೆಯುವಂತೆ ಒತ್ತಾಯಿಸಿದ್ದಾರೆ. ಆಸ್ಪತ್ರೆ ಗೆ ಬರುವಂತಹ ಕೇಸು ಗಳು ಎಮ್ ಎಲ್ ಸಿ ಮಾಡುವ ವಿವೇಚನಾ ಅಧಿಕಾರ ವೈದ್ಯ ರಿಗೆ ಇದೆ. ವಿಶೇಷವಾಗಿ ಅಜ್ಞಾತ ವ್ಯಕ್ತಿಗಳ ಅಪಘಾತ, ಶರೀರದ ಮೇಲೆ ಗಾಯಗಳಿದ್ದಾಗ, ಹೊಡೆದಾಟದ ಪ್ರಕರಣಗಳಲ್ಲಿ ಎಮ್ ಎಲ್ ಸಿ ಮಾಡುತ್ತಾರೆ. ಆದರೆ ಸರಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ಶವ ಹಸ್ತಾಂತರದ ವೇಳೆಯಲ್ಲಿ ಅನಗತ್ಯವಾಗಿ ಎಮ್ಎಲ್ ಸಿ ಮಾಡಿ ವಿಳಬ ಮಾಡಿದ್ದು ಸಂಶಯಾಸ್ಪದ. ಚಿಕಿತ್ಸೆಯ ಸಮಯದಲ್ಲಿ ಹಣ ಕೇಳಿರಬಹುದಾ? ಅಥವಾ ಇನ್ನಾವುದೇ ಸಿಟ್ಟು ಕಾರಣವಾಗಿಟ್ಟು ತೊಂದರೆ ಕೊಟ್ಟಿರಬಹುದಾ ಎಂಬ ಸಂಶಯ ಸಾರ್ವಜನಿಕರಲ್ಲಿ ಮೂಡಿದೆ.
ಮಾನ್ಯರೇ, ಈ ವಿಷಯಗಳ ಬಗ್ಗೆ ಹೆಚ್ಚಿನ ತನಿಖೆ ಮಾಡಿ ತಪ್ಪು ಎಸಗಿದವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲು ಈ ಮೂಲಕ ವಿನಂತಿ ಮಾಡುತ್ತೇವೆ. ಕ್ರೀಮ್ಸ್ ಅಸ್ಪತ್ರೆ ಇತ್ತಿಚಿನ ದಿನಗಳಲ್ಲಿ ತುಂಬ ಒಳ್ಳೆಯ ಸೇವೆ ನೀಡುತ್ತಿದ್ದು, ಜೋಯಡಾ ತಾಲೂಕಿನಲ್ಲಿ ಒಳ್ಳೆಯ ಹೆಸರು ಪಡೆಯುತ್ತಿದೆ. ಹೆಚ್ಚಿನ ರೋಗಿಗಳು ಬೆಳಗಾವಿ ಧಾರವಾಡ ಹೋಗದೆ ಕ್ರೀಮ್ಸ್ ಆಸ್ಪತ್ರೆ ಗೆ ಹೋಗುತ್ತಾರೆ. ಆದರೆ ಇಂತಹ ಘಟನೆಗಳಿಂದ ಕೆಟ್ಟ ಹೆಸರು ಬರಬಹುದು. ಅದ್ದರಿಂದ ದಯವಿಟ್ಟು ಸೂಕ್ತ ಕ್ರಮಗಳನ್ನು ಕೈಗೊಂಡು, ಜೋಯಡಾದ ರೋಗಿಗಳಿಗೆ ಹೆಚ್ಚಿನ ಸಹಕಾರ ನೀಡಬೇಕೆಂದು ತಾಲ್ಲೂಕಿನ ಜನರ ಪರವಾಗಿ ತಮ್ಮಲ್ಲಿ ವಿನಂತಿ ಮಾಡುತ್ತೇವೆ.
ಧನ್ಯವಾದಗಳು ತಮ್ಮ ವಿಶ್ವಾಸಿ
ಸತೀಶ್ ನಾಯ್ಕ್
ಅಧ್ಯಕ್ಷರು,
ಮುಖ್ಯ ಸಮಿತಿ
ಕಾಳಿ ಬ್ರಿಗೇಡ್,ಜೋಯಡಾ
ಸಹಿಗಳು
1. ಸುನೀಲ್ ಗಜಾನನ ದೇಸಾಯಿ, ಮುಖ್ಯ ಸಂಚಾಲಕರು, ಕಾಳಿ ಬ್ರಿಗೇಡ್
2. ಸಮೀರ್ ಮುಜಾವರ, ಕಾರ್ಯದರ್ಶಿ
3. ಸದಸ್ಯರು, ಮುಖ್ಯ ಸಮಿತಿ.
* ಪ್ರಭಾಕರ್ ನಾಯ್ಕ್
* ದಿನೇಶ್ ದೇಸಾಯಿ
* ಉಮೇಶ್ ವೇಳಿಪ್
* ಕಿರಣ ನಾಯ್ಕ್
* ನಾರಾಯಣ ಹೆಬ್ಬಾರ್
4. ಮುಖ್ಯ ಸಲಹಾಕಾರ
ರವಿ ರೇಡಕರ್
