Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಕುಂಬಾರವಾಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಸ್ಥಾಪನೆಯ ವಾರ್ಷಿಕೋತ್ಸವದ ಅಂಗವಾಗಿ ಅಕ್ಷಯ ತೃತೀಯಾ ಪ್ರಯುಕ್ತ ಶ್ರೀ ಸತ್ಯನಾರಾಯಣ ದೇವರ ಪೂಜೆ,ತೀರ್ಥ ಪ್ರಸಾದ ವಿತರಣೆ.ಮಧ್ಯಾಹ್ನ ಅನ್ನಪ್ರಸಾದ ನಡೆಯಿತು.
ರವಿವಾರ ಬೆಳಿಗ್ಗೆ ಶ್ರೀ ಶಿವಾಜಿ ಸರ್ಕಲ್‌ನಿಂದ ಶ್ರೀ ಕ್ಷೇತ್ರಪಾಲ ದೇವಸ್ಥಾನದವರೆಗೆ ಕುಂಬಾರವಾಡದ ಮುಖ್ಯ ರಸ್ತೆಯಲ್ಲಿ ನಡೆದ ಮೆರವಣಿಗೆಯಲ್ಲಿ ವಿವಿಧ ಸಮಾಜದ ಬಾಂಧವರು, ಯುವಕರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.ಭಗವಾ ಧ್ವಜ, ಭಜನೆ,ವಾದ್ಯದ ಜೊತೆ ಘೋಷಣೆಗಳ ನಡುವೆ ಮೆರವಣಿಗೆ ಭಕ್ತಿಭಾವದಿಂದ ಸಾಗಿತು.ಮೆರವಣಿಗೆಯಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಯಿತು.

Banner Ad
Banner Ad