ಸುದ್ದಿ ಕನ್ನಡ ವಾರ್ತೆ

ಅಂಕೋಲಾ:ಅಂಕೋಲಾ-ಹುಬ್ಬಳ್ಳಿ ಮಾರ್ಗ ಮಧ್ಯೆ ಮಾಸ್ತಿಕಟ್ಟಾ ಸಮೀಪ ಕಳೆದರೆಡು ದಿನಗಳ ಹಿಂದೆ ಒಂದು ಟ್ರಕ್ ಗಬ್ಬು ನಾರುವ ಕಸದ ರಾಶಿಯನ್ನು ಬೇರೆಕಡೆಯಿಂದ ತಂದು ಸುರಿದಿದ್ದಾರೆ.

ಹೆದ್ದಾರಿಯ ಪಕ್ಕ ಈ ರೀತಿ ಕಸದ ರಾಶಿ ಎಸೆದು ಹೋಗುತ್ತಿರುವುದು ಇದು ಮೊದಲೇನಲ್ಲ. ಇಂತವರನ್ನು ಗುರುತಿಸಿ ಶಿಕ್ಷೆ ನೀಡಬೇಕಿದೆ. ವನ್ಯಜೀವಿಗಳು, ದನಕರುಗಳು ಪ್ಲಾಸ್ಟಿಕ್ ತಿನ್ನುವ ಸಾಧ್ಯತೆಗಳು ಇವೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನವಹಿಸುವ ಅಗತ್ಯವಿದೆ ಎಂದು ಹಳವಳ್ಳಿಯ ಸೂರ್ಯ ಸಿದ್ಧಿ ಬೇಸರ ವ್ಯಕ್ತಪಡಿಸಿದ್ದಾರೆ.