ಸುದ್ದಿ ಕನ್ನಡ ವಾರ್ತೆ

ಜೊಯಿಡಾ ತಾಲೂಕಿನ ಕರಂಜೆ , ಸಿಸೈ, ಡಿಗ್ಗಿ, ಧೂಧಮಳ ಸೇರಿದಂತೆ ಹಲವಾರು ಬಜಾರಕುಣಂಗ ಗ್ರಾಮ ಪಂಚಾಯತಿ ಯ ಗ್ರಾಮ ಗಳು ಮತ್ತು ಕಾತೇಲಿ ಗ್ರಾಮ ಪಂಚಾಯತದ ಹಲವಾರು ಹಳ್ಳಿಗಳಿಗೆ ಸರ್ವಋತು ರಸ್ತೆಗಳಿಲ್ಲ.

ಹಳ್ಳ ಕೊಳ್ಳ ಗಳಿಗೆ ಸೇತುವೆ ಗಳಿಲ್ಲ ಗ್ರಾಮಸ್ಥರೇ ನಿರ್ಮಿಸಿಕೊಂಡ ಕಟ್ಟಿಗೆಯ ಕಾಲು ಸಂಕಗಳ ಮೂಲಕ ಓಡಾಡ ಬೇಕು ದೈನಂದಿನ ಕೆಲಸ ಕಾರ್ಯ ಮಕ್ಕಳ ಶಿಕ್ಸಣ ನೋಡಬೇಕು, ಇಲ್ಲಿ ಮಳೆ ಗಾಲ ಎಂದರೆ ಸಾಕು ಸರಿಯಾಗಿ ವಿದ್ಯುತ್ ಇರಲ್ಲ. ಜನರು ಮಳೆಗಾಲದ ಆರು ತಿಂಗಳು ಪಡಬಾರದ ಕಷ್ಟವನ್ನು ಪಡುತ್ತಾರೆ.

ಆದರೆ ಸ್ವಾತಂತ್ರ್ಯ ಸಿಕ್ಕಿ ಎಂಟು ದಶಕಗಳೇ ಕಳೆದರೂ ನಮ್ಮ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ,ಜನರಿಗೆ ಕನಿಷ್ಠ ಸೌಲಭ್ಯವನ್ನಾದರೂ ಕೊಡೋಣ ಎಂಬಂತ ಕಾಳಜಿ ಬರಲಿಲ್ಲ. ಅದರಲ್ಲೂ ದೇಶಕ್ಕೆ ಬೆಳಕನ್ನು ನೀಡಿದ ಸುಪಾ ತಾಲೂಕಿನ ಜನತೆ ಸರ್ವಸ್ವವನ್ನು ಕಳೆದುಕೊಂಡರೂ ಅವರಿಗೆ ಮೂಲಭೂತ ಸೌಲಭ್ಯವನ್ನು ಸರಕಾರ ನೀಡಲಿಲ್ಲ. ಇದರಿಂದಾಗಿ ಜೋಯಿಡಾ ದ ಜನತೆ ಇನ್ನೂ, ಹಿಂದುಳಿಯಲು ಕಾರಣವಾಗಿದೆ ಜನತೆಗೆ ಬೇಕಾದ ರಸ್ತೆ ಸೇತುವೆ, ವಿದ್ಯುತ್. ಸರಿಯಾಗಿ ಇಲ್ಲದ ಕಾರಣ ಜನತೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಹಿಂದೆ ಸುಪಾ ದ ಕಾಳಿ ನದಿಗೆ ಕಟ್ಟಲಾದ ಜಲಾಶಯದಲ್ಲಿ 47 ಹಳ್ಳಿಗಳು ಮುಳುಗಡೆ ಯಾದವು , ಇರುವ ಹಳ್ಳಿಗಳ ರಸ್ತೆ , ಸೇತುವೆಗಳು ಮುಳುಗಿದವು. ಆದರೆ ಕರ್ನಾಟಕ ವಿದ್ಯುತ್ ನಿಗಮ ಇವುಗಳನ್ನು ಸರಿ ಮಾಡಿಕೊಡಬೇಕಿತ್ತು ರಸ್ತೆ ಸೇತುವೆಗಳನ್ನು ಕೆ ಪಿ ಸಿ ಮಾಡಿ ಕೊಡಲೇ ಇಲ್ಲ. ಇದರಿಂದ ಗ್ರಾಮಗಳಿಗೆ ಹೋಗುವ ರಸ್ತೆ ಸಂಪರ್ಕಗಳು ಕಡಿತಗೊಂಡು ಜನರು ಅತಂತ್ರರಾದರು.

ಇಂತವರ ಸಮಸ್ಯೆಗೆ ಅಧಿಕಾರಿಗಳು ಸಭೆ ನಡೆಸಿದರೂ ಅವೆಲ್ಲ ಕಡತಗಳಾದವು ವಿನಃ ಕೆಲಸ ಕಾರ್ಯಗಳು ಆಗಲೇ ಇಲ್ಲ. ಹೀಗಾಗಿ ಬಜರಾಕುಣಂಗ ಮತ್ತು ಕಾತೇಲಿ ಮತ್ತು ಅಣಶಿ ಗ್ರಾಮ ಪಂಚಾಯತಿಗಳ ಹಲವಾರು ಹಳ್ಳಿಗಳಿಗೆ ಮಳೆಗಾಲ ಬಂತೆಂದರೆ ಶಾಪ ಕಾಡಿದಂತಹ ಅನುಭವ ಜನತೆಗೆ ಆಗುತ್ತದೆ. ಮಕ್ಕಳ ವಿದ್ಯಾಭ್ಯಾಸ , ಆರೋಗ್ಯ , ಸರಕಾರಿ ಕೆಲಸ ರೇಷನ್ ಎಲ್ಲದಕ್ಕೂ ತಿಲಾಂಜಲಿ ಇಡಬೇಕಾದ ಸ್ಥಿತಿ ಇನ್ನೂ ಇದೆ.
ಕಳೆದ 40 ವರ್ಷಗಳ ಹಿಂದೆ ಸ್ಥಳೀಯ ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣವಿಲ್ಲದೆ ಬೃಹತ್ ಯೋಜನೆಗಳ ನಿರ್ಮಾಣದ ಮಾಹಿತಿ ತಿಳಿದಿರಲಿಲ್ಲ. ಈಗ ವಿದ್ಯಾರ್ಥಿಗಳಿಗೆ ಯೋಜನೆಗಳ ಬಗ್ಗೆ ತಿಳಿಯುವ ತಿಳುವಳಿಕೆ ಬಂದಿದೆ. ಆದರೆ ಈಗಾಗಲೇ ಅರಣ್ಯ ಇಲಾಖೆಯ ಹಲವಾರು ಯೋಜನೆಗಳಿಂದ ನಾಗರೀಕರು ತಮಗೆ ಇರುವ ಸೌಲಭ್ಯಗಳನ್ನು ಬಳಸಿಕೊಳ್ಳಲು ಕೂಡ ಇಲಾಖೆ ಅಡ್ಡಗಾಲು ಹಾಕುತ್ತಿರುವುದು ಜನತೆಯ ಅಭಿವೃದ್ಧಿಗೆ ಹಿನ್ನಡೆ ಆಗುವಂತಾಗಿದೆ.ಕುಡಿಯುವ ನೀರು, ರಸ್ತೆ, ಸೇತುವೆ, ಗಳ ನಿರ್ಮಾಣಕ್ಕೆ ಕೆಲವು ಇಲಾಖೆಗಳು ತಡೆ ನೀಡುತ್ತಿರುವ ಕಾರಣ ಸ್ಥಳೀಯ ಆಡಳಿತ ಕೂಡ, ನಿಸ್ತೆಜ ವಾಗಿದೆ.

%ಜನತೆ ಬದುಕಲು ಸರಕಾರ ಮೂಲಭೂತ ವ್ಯವಸ್ಥೆ ಮಾಡಿಕೊಡಬೇಕಾಗಿದೆ, ಇದಕ್ಕೆ ಎಲ್ಲ ಇಲಾಖೆ ಗಳೂ ಜವಾಬ್ದಾರರು ಎಂದು,, ಹಿಂದೆ ತಾಲೂಕಿನ ಸಮಸ್ಯೆ ಗಳ ಬಗ್ಗೆ ಚರ್ಚಿಸಲು ಡಿಗ್ಗಿಯಲ್ಲಿ ಸಭೆ ನಡೆಸಿದ ಜಿಲ್ಲಾಧಿಕಾರಿ ಗಂಗೂ ಬಾಯಿ ಮಾನಕರ ಹೇಳಿದ್ದರು, ಆದರೆ ಅವರು ಮಂಜೂರು ಮಾಡಿದ ಯಾವ ಕೆಲಸಗಳೂ, ಆಗಿಲ್ಲ, ಪಡಿತರ ಅಂಗಡಿ ಕೂಡ ಆಗದೇ ಇರುವದು ಅಧಿಕಾರಿಗಳ, ಕಾಳಜಿಗೆ ಹಿಡಿದ ಕನ್ನಡಿ ಯಾಗಿದೆ.% ಬಜಾರ್ ಕುಣಂಗ್ ದಿಂದ ಕರಂಜೆ ಗ್ರಾಮಕ್ಕೆ ಹೋಗಲು ಕಾಲು ಸಂಕ ದಾಟಿ ಮಣ್ಣಿನ ರಾಡಿ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಜನತೆ ಹೋಗುವುದನ್ನು ಅಧಿಕಾರಿಗಳು ಜನಪ್ರತಿನಿದಿನಗಳು ನೋಡಬೇಕು, ಅಂದಾಗ ಮಾತ್ರ, ಜೀವನ ದ ಅರ್ಥ ತಿಳಿಯಲು ಸಾಧ್ಯ.