ಸುದ್ದಿ ಕನ್ನಡ ವಾರ್ತೆ
​ಗೋವಾ:ಬಾಂಬೋಲಿಂ ಫ್ಲೈ ಓವರ್‌ನಲ್ಲಿ ಜುಲೈ 19ರಂದು ನಡೆದ ಭೀಕರ ನಾಲ್ಕು ವಾಹನಗಳ ಸರಣಿ ಅಪಘಾತದಲ್ಲಿ ಹ್ಯುಂಡೈ i20 ಕಾರೊಂದು ನಿಯಂತ್ರಣ ತಪ್ಪಿ ಉರುಳಿ ಮತ್ತೊಂದು ಎಸ್‌ಯುವಿ ವಾಹನದ ಮೇಲೆಯೇ ಬಿದ್ದಿದೆ.

ಅಪಘಾತದಲ್ಲಿ ನಾಲ್ಕು ವಾಹನಗಳಿಗೆ ಹಾನಿಯಾಗಿದ್ದು, ಘಟನೆಯಿಂದ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು.

​ಸ್ಥಳಕ್ಕೆ ಪೊಲೀಸರು ಹಾಗೂ ತುರ್ತು ಸೇವಾ ಸಿಬ್ಬಂದಿ ಆಗಮಿಸಿ ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಪುನಃ ಆರಂಭಿಸಿದರು. ಘಟನೆಯ ನಿಖರ ಕಾರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಸದ್ಯಕ್ಕೆ ಗಂಭೀರ ಸಾವು-ನೋವುಗಳ ಬಗ್ಗೆ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ.