ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಬರುವ ಅರಬೈಲ್ ಘಾಟ್ ನಲ್ಲಿ ಕಳೆದ ಕೆಲ ದಿನಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು ಈ ಮಾರ್ಗದಲ್ಲಿ ಓಡಾಟ ನಡೆಸುವವರು ಜೀವ ಕೈಯ್ಯಲ್ಲಿ ಹಿಡಿದು ಓಡಾಡುವತಾಗಿದೆ. ಪ್ರತಿದಿನ ಈ ಘಾಟ್ ನಲ್ಲಿ ಒಂದಿಲ್ಲೊಂದು ಅಪಘಾತ ಸಭವಿಸುತ್ತಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.
ಅರಬೈಲ್ ಘಾಟ್ ಮಾರ್ಗದಲ್ಲಿ ಪ್ರಮುಖವಾಗಿ ಹೊರ ರಾಜ್ಯದ ಮತ್ತು ಹೊರ ಭಾಗದ ವಾಹನಗಳು ಈ ಘಾಟ್ ಮಾರ್ಗದ ಅಪಾಯಕಾರಿ ತಿರುವುಗಳ ಅರಿವಿಲ್ಲದೆಯೇ ಅತಿವೇಗವಾಗಿ ಬಂದು ಹೆಚ್ಚಿನ ಅಪಘಾತ ಸಂಭವಿಸುತ್ತಿರುವುದು ಬಹುತೇಕವಾಗಿ ಕಂಡುಬರುತ್ತಿದೆ. ದೊಡ್ಡ ದೊಡ್ಡ ಕಂಟೇನರ್ಮ ಟ್ರಕ್ ಗಳಂತೂ ಅಪಾಯಕಾರಿ ತಿರುವಿನಲ್ಲಿಯೂ ಅತಿ ವೇಗವಾಗಿ ವಾಹನ ಚಲಾಯಿಸಿಕೊಂಡು ಬಂದು ಅಪಘಾತಕ್ಕೀಡಾಗುತ್ತಿದೆ. ಇದರಿಂದಾಗಿ ಸುರಕ್ಷಿತವಾಗಿ ವಾಹ ನ ಚಲಾವಣೆ ಮಾಡುವವರಿಗೂ ಆತಂಕ ಹೆಚ್ಚುವಂತಾಗಿದೆ.
ಆಡಳಿತವು ಏನು ಮಾಡಬಹುದು…?
ಅರಬೈಲ್ ಘಟ್ಟ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳ ನಿಯಂತ್ರಣಕ್ಕೆ ಆಡಳಿತವು ಕಠಿಣ ಕ್ರಮ ಕೈಗೊಳ್ಳಬೇಕಿದೆ. ಇಷ್ಟೇ ಅಲ್ಲದೆದೇ ಈ ಭಾಗದಲ್ಲಿ ಕ್ಯಾಮರಾಗಳನ್ನು ಅಳವಡಿಸಿಯಾದರೂ ಅತಿ ವೇಗವಾಗಿ ಬರುವ ವಾಹನಗಳಿಗೆ ದಂಡ ವಿಧಿಸುವ ಕ್ರಮ ಕೈಗೊಳ್ಳಬೇಕಿದೆ. ಇಷ್ಟೇ ಅಲ್ಲದೆಯೇ ಅರಬೈಲ್ ಘಟ್ಟ ಆರಂಭದಲ್ಲಿ ಸುರಕ್ಷಿತ ಚಾಲನೆಗೆ ಆಡಳಿತವು ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ವಾಹನ ಸವಾರರಿಗೆ ಎಚ್ಚರಿಕೆ ನೀಡಿ ಮುಂದೆ ಕಳಿಸುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಇಷ್ಟೇ ಅಲ್ಲದೆಯೇ ವಾಹನ ಸವಾರರು ಕುಡಿದು ವಾಹನ ಚಲಾಯಿಸುತ್ತಿದ್ದಾರೆಯೇ..? ಎಂಬ ಯಾವುದೇ ತಪಾಸಣೆ ಇಲ್ಲದ ಕಾರಣ ಈ ಭಾಗದಲ್ಲಿ ಅದೆಷ್ಟೋ ಅಮಾಯಕ ಜೀವಗಳು ಯಾರದ್ದೋ ತಪ್ಪಿಗೆ ಬಲಿಯಾಗಿವೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ ಎಂಬುದು ಹೆಚ್ಚಿನ ವಾಹನ ಸವಾರರ ಅಭಿಪ್ರಾಯವಾಗಿದೆ.
