ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ ಯಲ್ಲಾಪುರ ಸಮೀಪದ ಚಿಕ್ಕಮಾವಳ್ಳಿ ಕ್ರಾಸ್ ಸಮೀಪ ಕಾರನ್ನು ಓವರ್‌ಟೇಕ್ ಮಾಡುವ ವೇಳೆ ಸ್ಕೂಟಿ ಸಾರಿಗೆ ಸಂಸ್ಥೆಯ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವು ಕಂಡ ಘಟನೆ ಭಾನುವಾರ ಸಂಜೆ ನಡೆದಿದೆ.
ಮೃತರನ್ನು
ಸುಮೀತ್ ಹನಮನಳ್ಳಿ ಇಂಡಿ ಪಂಪ್ ಹತ್ತಿರ,(18),ಮಂಜುನಾಥ ಶೇಖರ ಗೌಡ,ಇಂಡಿ ಪಂಪ್ ಹತ್ತಿರ (27) ದ ಹಳೆ ಹುಬ್ಬಳ್ಳಿ ನಿವಾಸಿಗಳಾಗಿದ್ದಾರೆ.
ಕಾರವಾರದಿಂದ ಸಿಂಧನೂರಿಗೆ ಹೊರಡುತ್ತಿದ್ದ ಸಾರಿಗೆ ಬಸ್ಸು (KA-31 F-1664) ಚಿಕ್ಕಮಾವಳ್ಳಿ ಕ್ರಾಸ್ ಬಳಿ ಬರುತ್ತಿದ್ದಾಗ, ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಸ್ಕೂಟಿ (KA-63 EB-8690) ಕಾರನ್ನು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಓವರ್‌ಟೇಕ್ ಮಾಡಿ ಎದುರಿನಿಂದ ಬರುತ್ತಿದ್ದ ಬಸ್‌ಗೆ ಸ್ಕೂಟಿ ಮುಖಾಮುಖಿ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಸ್ಕೂಟಿ ಚಾಲಕ ಮಂಜುನಾಥ ಹಾಗೂ ಹಿಂಬದಿ ಸವಾರ ಸುಮೀತ್ ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಈ ಇಬ್ಬರೂ ಸವಾರರು ಹೆಲ್ಮೆಟ್ ಧರಿಸಿರಲಿಲ್ಲ. ಅಪಘಾತದಲ್ಲಿ ಸ್ಕೂಟಿ ಹಾಗೂ ಬಸ್ ಜಖಂಗೊಂಡಿದೆ.ಬಸ್ ನಿರ್ವಾಹಕ ಸುರೇಶ್ ಗುಬ್ಬೆವಾಡ ನೀಡಿದ ದೂರಿನ ಮೇರೆಗೆ, ಮೃತ ಸ್ಕೂಟಿ ಚಾಲಕನ ವಿರುದ್ಧ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಸಂಭವಿಸಿರುವ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.
