Banner Ad

ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಪ್ರಸಿದ್ಧ ಬಾಗಾ ಬೀಚ್ ನಲ್ಲಿ ಅಲೆಗಳ ರಭಸಕ್ಕೆ ಸಿಲುಕಿ ವಿಜಯಪುರದ ವ್ಯಕ್ತಿ ನೀರಲ್ಲಿ ಕೊಚ್ಚಿಹೋದ ಘಟನೆ ನಡೆದಿದೆ.
ವಿಜಯಪುರದ ಅಶ್ಫಕ್ ಮಸಾಲಿ(34) ಎಂಬ ವ್ಯಕ್ತಿಯೇ ಗೋವಾದ ಸಮುದ್ರದಲ್ಲಿ ಕೊಚ್ಚುಹೋದ ದುರ್ದೈವಿಯಾಗಿದ್ದಾನೆ. ಬೃಹತ್ ಅಲೆಗಳು ಅಪ್ಪಳಿಸುವಂತಹ ಬಂಡೆಗಳ ಮೇಲೆ ಈತ ನಿಂತಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗೋವಾದ ಬಾಗಾ ಬೀಚ್ ನಲ್ಲಿ ಭಾರಿ ಅಲೆಗಳು ಅಪ್ಪಳಿಸುವಂತಹ ಬಂಡೆಗಳ ಮೇಲೆ ಈ ವ್ಯಕ್ತಿ ಕುಳಿತಿದ್ದ ಎನ್ನಲಾಗಿದೆ. ಅಲೆಗಳ ರಭಸಕ್ಕೆ ಈತ ಸಮುದ್ರದಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ರಕ್ಷಣಾ ಕಾರ್ಯ ಕೈಗೊಂಡರು ಈತನನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

Banner Ad
Banner Ad