ಸುದ್ದಿ ಕನ್ನಡ ವಾರ್ತೆ

 ಉತ್ತರ ಕನ್ನಡ ಜಿಲ್ಲೆಗೆ ಸಚಿವರಾದ ಯು ಟಿ ಖಾದರ ಅವರು ಉಸ್ತುವಾರಿ ಸಚಿವರಾಗಿ ನೇಮಕ ಗೊಂಡಿದ್ದಾರೆ. ಯಾರು ಉಸ್ತುವಾರಿ ಸಚಿವರಾಗಿ ಜಿಲ್ಲೆಗೆ ಬರುತ್ತಾರೆ ಎಂದು ಸಾಕಷ್ಟು ಜನರು ನಿರೀಕ್ಷೆ ಮಾಡುತ್ತಲೇ ಇದ್ದರು, ಈಗ ಖಾದರ ಅವರು ನಮ್ಮ ಜಿಲ್ಲೆಗೂ ಉಸ್ತುವಾರಿಸಚಿವ ರಾದರು. ಸಚಿವ ಖಾದರ ಅವರು ಉತ್ತಮ ರಾಜಕಾರಣಿ, ಈ ಹಿಂದೆ ವಿಧಾನ ಸಭೆಯ ಅಧ್ಯಕ್ಷ ರಾಗಿ ತುಂಬಾ ಉತ್ತಮ ಕೆಲಸ ಮಾಡಿದ್ದಾರೆ, ಯಾರಲ್ಲೂ ದ್ವೇಷ ಕಟ್ಟಿಕೊಳ್ಳದ ಅವರ ಕೆಲಸ ನಿಜವಾಗಿ ಅವರನ್ನು ಈ ಮಟ್ಟಕ್ಕೆ ಬೆಳೆಸಿದೆ ಎಂದು ಹೇಳಲಾಗುತ್ತಿದೆ ಅಂತವರು ನಮ್ಮ ಜಿಲ್ಲೆಗೂ ಉಸ್ತುವಾರಿ ಯಾಗಿ ಬಂದಿರುವುದು ಹೆಮ್ಮೆಯ ವಿಷಯ, ಇದೇ ತರಹ ಹಿಂದೆ ಕೋಟಾ ಶ್ರೀನಿವಾಸ್ ಪೂಜಾರಿ ಕೂಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ,

ಈಗಿನ ಉಸ್ತುವಾರಿ ಸಚಿವ ಯು ಟಿ ಖಾದರ ರವರ ಮೇಲೆ ಜಿಲ್ಲೆಯ ಎಲ್ಲ ತಾಲೂಕಿನ ಜನತೆ ಆಶಾ ಭಾವನೆ ಹೊಂದಿದ್ದಾರೆ, ನಮ್ಮ ನಮ್ಮ ತಾಲೂಕಿನ ಸಮಸ್ಯೆಗಳು ಹೆಚ್ಚಿನ ರೀತಿಯಲ್ಲಿ ಬಗೆಹರಿಯಲಿ ಎಂದು ಕಾಯುತ್ತಿದ್ದಾರೆ, ಖಾದರ ಅವರು ಚುರುಕಿನ ರಾಜಕಾರಣಿಗಳು, ಹಾಗಾಗಿ ಅವರು ನಿಂತಲ್ಲಿ ನಿಲ್ಲದೇ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕು ಗಳಲ್ಲಿ ಓಡಾಡಿ ಅಲ್ಲಿನ ಸಮಸ್ಯೆ ಗಳಿಗೆ ತಕ್ಕಮಟ್ಟಿಗೆ ಪರಿಹಾರ ಸೂಚಿಸಬಹುದು ಎಂಬ ನಿರೀಕ್ಷೆ ಜನರಲ್ಲಿದೆ. ಮುಂದಿನ ಸಚಿವ ಸಂಪುಟ ವಿಸ್ತರಣೆ ಯಲ್ಲಿ ನಮ್ಮ ಜಿಲ್ಲೆಗೆ ಪ್ರಾತಿನಿದ್ಯ ದೊರೆತು ಅವರು ಉಸ್ತುವಾರಿ ಆಗುವ ವರೆಗೆ ಸಚಿವ ಖಾದರ ಅವರೇ ಉಸ್ತುವಾರಿ ಯಾಗಿ ಉತ್ತಮ ಕೆಲಸ ಮಾಡಲಿ ಎಂಬ ಆಶಾ ಭಾವನೆ ಯಲ್ಲಿ ಜನರಿದ್ದಾರೆ, ನಮ್ಮ ಜಿಲ್ಲೆಯವರೆ ಮಂತ್ರಿ ಯಾಗಿ ಉಸ್ತುವಾರಿ ಯಾಗಿ ಜಿಲ್ಲೆಯ ತಾಲೂಕು ಗಳಿಗೆ ಹೋಗದೇ ಇರುವುದಕ್ಕಿಂತ, ಹೊರ ಜಿಲ್ಲೆ ಯವರಾದರೂ ನಮ್ಮ ಕಷ್ಟ್ಟಕ್ಕೆ ಸ್ಪಂದನೆ ತೋರಿಸುವವರಾದರೆ ಯಾರು ಉಸ್ತುವಾರಿ ಗಳಾದರೇನು ಎನ್ನುವ ಮಾತುಗಳು ಕೇಳಿ ಬಂದಿವೆ. ವಿಸ್ತಾರ ವಾದ ಜಿಲ್ಲೆಯ ಸಮಸ್ಯೆಗಳು ಬೇಗನೇ ಬಗೆಹರಿಯಲಿ, ಉಸ್ತುವಾರಿ ಗಳು ಆ ಬಗ್ಗೆ ಪ್ರಯತ್ನಿಸಬೇಕಾಗಿದೆ.