Banner Ad

ಸುದ್ದಿ ಕನ್ನಡ ವಾರ್ತೆ

ಜೊಯಿಡಾ :ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ವಿಸ್ತರಣಾ ಶಾಖೆ ಜೋಯಿಡಾ ಹಾಗೂ ಶೋಧ ಮೋಟರ್ಸ್ ಪ್ರೈವೇಟ್ ಲಿಮಿಟೆಡ್ ಹುಬ್ಬಳ್ಳಿ ಇವರ ಸಹಯೋಗ ದೊಂದಿಗೆ ಹತ್ತು ದಿನಗಳ ಕಾಲ ಫ್ಯಾಶನ್ ಬ್ಲೌಸ್ ಡಿಸೈನ್ ಟ್ರೈನಿಂಗ್ ಸಮಾರೋಪ ಸಮಾರಂಭವನ್ನು ಕಡಗರ್ಣಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.

Banner Ad

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಮತಿ ವನಿತಾ ಸಿ ಯಾತಗೆರಿ ಮ್ಯಾನೇಜರ್ ಮೋಟರ್ ಇನ್ಸೂರೆನ್ಸ್ ಡಿಪಾರ್ಟ್ಮೆಂಟ್ ಶೋಧಾ ಮೋಟರ್ಸ್ ಲಿಮಿಟೆಡ್ ಹುಬ್ಬಳ್ಳಿ ಇವರು ಬಂದು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು ಮತ್ತು ಶಿಬಿರಾರ್ಥಿಗಳ ಕುರಿತು ಮಾತನಾಡುತ್ತ ತರಬೇತಿಯಿಂದ ಮುಂದಿನ ನಿಮ್ಮ ಬದುಕು ಸ್ವಾವಲಂಬಿ ಜೀವನವನ್ನು ನಡೆಸಲು ಸಹಾಯವಾಗುತ್ತದೆ ಮತ್ತು ಪ್ರತಿನಿತ್ಯ ಟೈಲರಿಂಗ್ ಉದ್ಯೋಗವನ್ನು ಜೀವನದಲ್ಲಿ ನಡೆಸಿಕೊಂಡು ಹೋಗಿ ಎಂದು ಕರೆ ನೀಡಿ, ಇದರಿಂದ ಹಣ ಸಂಪಾದನೆ ಮಾಡಲಿಕ್ಕೆ ಹೆಚ್ಚಿನ ಅವಕಾಶಗಳು ಇರುತ್ತವೆ ಎಂದರು ಕಾರ್ಯಕ್ರಮದ ಇನ್ನೋರ್ವ ಅತಿಥಿಗಳಾದ ದೀಪಕ್ ನಾಕರೆ ಊರಿನ ಹಿರಿಯರು ಇವರು ಇಂತಹ ತರಬೇತಿಗಳನ್ನು ಇನ್ನು ಹೆಚ್ಚಿನ ತರಬೇತಿಗಳನ್ನು ಹಳ್ಳಿಗಳ ಜನರಿಗೆ ತರಬೇಕು ಇದರಿಂದ ಉತ್ತಮ ಜೀವನ ನಡೆಸಲಿಕ್ಕೆ ಸಾಧ್ಯ ಮತ್ತು ಟೆಲ್ ರಿಂಗ್ ತರಬೇತಿ ಹೆಣ್ಣು ಮಕ್ಕಳಿಗೆ ಒಳ್ಳೆಯ ಉದ್ಯೋಗ ವಾಗಿದೆ ಹಾಗೂ ಮೇಕ್ ಇನ್ ಇಂಡಿಯಾ ಎನ್ನುವುದು ಬೆಳೆಯಲಿಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು .

ಕಾರ್ಯಕ್ರಮದ ಅಧ್ಯಕ್ಷರಾದ ವಿನಾಯಕ್ ಚವಾನ್ ಸಂಯೋಜನಾಧಿಕಾರಿಗಳು ಸಿಬಿಡಿ ಆರ್ ಸೆಟ್ ಹಳಿಯಾಳ ಇವರು ಸಂಸ್ಥೆಯಲ್ಲಿ ಸಿಗುವ ತರಬೇತಿಗಳ ಕುರಿತು ಹಾಗೂ ಸ್ವಉದ್ಯೋಗದ ಕುರಿತು ಮಾತನಾಡಿದರು ವೇದಿಕೆ ಯಲ್ಲಿ ಗುರು ಗಾಳ್ಕರ್ ಹಿರಿಯರು, ರಾಜೇಶ್ವರಿ ಎಸ್ ಜಾವಳಿ, ಎಚ್ ಆರ್ ಎ ಟ್ರೈನಿ ದೀಕ್ಷಿತಾ ವೆಲಿಪ್ ಉಪಸ್ಥಿತರಿದ್ದರು ಕೊನೆಯಲ್ಲಿ ಅಶೋಕ್ ಸೂರ್ಯವಂಶಿ ಯೋಜನಾಧಿಕಾರಿಗಳು ಸಿಬಿಡಿ
ಆರ್ಸೆಟ್ ಸಂಸ್ಥೆ ಜೋಯಿಡಾ ಆಯೋಜಿಸಿ ವಂದಿಸಿದರು 29 ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸರ್ಟಿಫಿಕೇಟ್ ಪಡೆದುಕೊಂಡರು.

Banner Ad