Banner Ad

ಸುದ್ದಿ ಕನ್ನಡ ವಾರ್ತೆ
ಕಾರವಾರ: ಸಮುದ್ರ ಕಣ್ಗಾವಲಿನಿಂದ ಹಿಡಿದು ವಿಪತ್ತು ಪರಿಹಾರ ರಕ್ಷಣಾ ಕಾರ್ಯಚರಣೆ ಹಾಗೂ ಮಾನವ ರಹಿತ ತಂತ್ರಜ್ಞಾನಗಳ ಪ್ರಯೋಗದ ವರೆಗೆ ಹತ್ತು ಹಲವು ಜವಾಬ್ದಾರಿಗಳನ್ನು ನಿರ್ವಹಿಸಬಲ್ಲ ಸ್ವದೇಶಿ ಯುದ್ಧ ನೌಕೆ ಐಎನ್ಎಸ್ ಸಮರ್ಥಕ್ ಅನ್ನು ಉತ್ತರ ಕನ್ನಡದ ಕಾರವಾರದ ನೌಕಾ ನೆಲೆಯಲ್ಲಿ ಶುಕ್ರವಾರ ಲೋಕಾರ್ಪಣೆಗೊಂಡಿದೆ. ಇದು ಆತ್ಮ ನಿರ್ಭರ ಭಾರತ ಉಪಕ್ರಮದ ಅಡಿಯಲ್ಲಿ ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆ ಹೆಚ್ಚುತ್ತಿರುವುದನ್ನು ಪ್ರತಿಬಿಂಬಿಸುತ್ತದೆ.

ಭಾರತದ ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ ರವರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಈ ಯುದ್ಧ ನೌಕೆಯನ್ನು ದೇಶಕ್ಕೆ ಸಮರ್ಪಿಸಿದರು.

Banner Ad

ಈ ಸಂದರ್ಭದಲ್ಲಿ ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕೃಷ್ಣಸ್ವಾಮಿನಾಥನ್, ನೌಕಾಪಡೆಯ ಹಿರಿಯ ಅಧಿಕಾರಿಗಳು , ರಕ್ಷಣಾ ಸಚಿವಾಲಯದ ಗಣ್ಯರು ಮತ್ತಿತರರು ಉಪಸ್ಥಿತರಿದ್ದರು.

ಈ ಸಾಮರ್ಥ್ಯವು ಕಡಲ ಭದ್ರತೆ ಮತ್ತು ವಿಚಕ್ಷಣ ಕಾರ್ಯಗಳನ್ನು ಬಲಪಡಿಸುವುದರ ಜೊತೆಗೆ ವಿಶ್ವಾಸಾರ್ಹ ಭದ್ರತಾ ಪಾಲುದಾರನಾಗಿ ಭಾರತೀಯ ನೌಕಾಪಡೆಯ ಪಾತ್ರವನ್ನು ಮತ್ತಷ್ಟು ವಿಸ್ತರಿಸಲಿದೆ ಎಂದು ನೌಕಾಪಡೆಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 100 ಮೀಟರ್ ಗಿಂತ ಹೆಚ್ಚು ಉದ್ದ ಹೊಂದಿರುವ ಈ ನೌಕೆಯು ಸುಮಾರು 5000 ಟನ್ ತೂಕ ಸ್ಥಳಾಂತರಿಸುವ ಸಾಮರ್ಥ್ಯ ಹೊಂದಿದೆ. ಇಷ್ಟೇ ಅಲ್ಲದೆ 7,200 ನಾಟಿಕಲ್ ಮೈಲುಗಳಿಗೂ ಅಧಿಕ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ.

Banner Ad