ಸುದ್ದಿ ಕನ್ನಡ ವಾರ್ತೆ
ಜೊಯಿಡಾ ತಾಲೂಕಿನ ಅಣಶಿ ಗ್ರಾಮ ಪಂಚಾಯತ ಸಾರ್ವಜನಿಕರು ‘ನಮ್ಮ ಮನೆ ನಮ್ಮ ಹಕ್ಕು’ ಎಂಬ ಘೋಷವಾಕ್ಯದೊಂದಿಗೆ ಪ್ರತಿಭಟನೆ ನಡೆಸಿ ಪಿ.ಡಿ.ಓ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಹೋರಾಟ ನೇತೃತ್ವ ವಹಿಸಿದ ಅಣಶಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕೃಷ್ಣಾ ಅಣಶಿಕರ ಮಾತನಾಡಿ ಅರಣ್ಯ, ಬೆಟ್ಟ, ಸರ್ಕಾರಿ ಭೂಮಿ, ಗ್ರಾಮಠಾಣ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಮನೆ ನಿರ್ಮಿಸಿ ಶತಮಾನಗಳಿಂದ ಜನರು ಬದುಕುತ್ತಿದ್ದಾರೆ. ಆದರೆ ಸರ್ಕಾರ ಆದೇಶ ಹೊರಡಿಸಿ ಗ್ರಾಮ ಪಂಚಾಯತ್ ಗಳು ತೆರೆಗೆ ವಸೂಲಿ ಮಾಡಬಾರದೆಂದು ಹೇಳಿದ್ದು ತಪ್ಪು.ಆದ್ದರಿಂದ ಆದೇಶ ತಕ್ಷಣ ಹಿಂದೆ ಪಡೆಯಬೇಕು,ಪಡೆಯದಿದ್ದರೆ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸುರೇಶ್ ಗಾವಡಾ, ಸಂತೋಷ್ ಅಣಶಿಕರ, ಮ್ಹಾಬಳೇಶ್ವರ ಕಾಜುಗಾರ, ರಾಯಾ ವೇಳಿಪ, ರಾಜೇಶ್ ಅಣಶಿಕರ, ಗಜಾನನ ವೇಳಿಪ ಬಾಕಿ, ದತ್ತಾ ಗಾವಡಾ, ದತ್ತಾರಾಮ ಮಾಸ್ಕರ್, ಸತೀಶ್ ದೇಸಾಯಿ, ಗಜಾನನ ಗಾವಡಾ ಮುಂತಾದವರು ಇದ್ದರು..
