ಸುದ್ದಿ ಕನ್ನಡ ವಾರ್ತೆ

ಜೋಯಿಡಾ ದ ಉಕ್ಕಳ ದಲ್ಲಿ ಇಂದು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವತಿಯಿಂದ ಸಮಗ್ರ ಕೃಷಿ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು ಈ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ x ಇಬ್ರಾಹಿಂ ಕಲ್ಮಂಗಿ ಕೃಷಿ ಅಧಿಕಾರಿಗಳು ಕೃಷಿ ಇಲಾಖೆ ಇವರು ಕೃಷಿ ಇಲಾಖೆಯಿಂದ ಸಿಗುವ ಸವಲತ್ತುಗಳ ಕುರಿತು ಸಮಗ್ರ ಕೃಷಿ ಹೈನುಗಾರಿಕೆ, ಆಡು ಸಾಕಾಣಿಕೆ, ಕೋಳಿ ಸಾಕಾಣಿಕೆ ಎರೆಹುಳ ಗೊಬ್ಬರ, ತೊಟ್ಟೆ ನಿರ್ಮಾಣ, ಜೀವಾಮೃತ , ಪಂಚಗವಿ, ಸರ್ಕಾರದಿಂದ ಸಿಗುವ ಸಬ್ಸಿಡಿ ಸಹಾಯಧನದ ಕುರಿತು ತರಬೇತಿ ನೀಡಿದರು.

ಈ ಕಾರ್ಯಕ್ರಮದ ವೇದಿಕೆ ಮೇಲೆ ಮದನ್ ಮೋಹನ್ ಹಂಜಗಿ ಅಸಿಸ್ಟೆಂಟ್ ಟೆಕ್ನಿಕಲ್ ಮ್ಯಾನೇಜರ್ ಆರ್ ಎಸ್ ಕೆ ಕುಂಬಾರವಾಡ, ಪವಿತ್ರ ಮೇಡಂ ಅಂಗನವಾಡಿ ಶಿಕ್ಷಕರು ನಂದಿತಾ ಮೇಡಂ ಅಂಗನವಾಡಿ ಶಿಕ್ಷಕರು ನಾಗವೇಣಿ ಕೃಷಿ ಸಕಿ ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಅಶೋಕ್ ಸೂರ್ಯವಂಶಿ ಯೋಜನಾಧಿಕಾರಿಗಳು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಜೋಯಿಡಾ ಆಯೋಜಿಸಿ ವಂದಿಸಿದರು 35 ಫಲಾನುಭವಿಗಳು ಭಾಗವಹಿಸಿದ್ದರು.