ಸುದ್ದಿ ಕನ್ನಡ ವಾರ್ತೆ
ಜೋಯಿಡಾ -ದಾಂಡೇಲಿಯ ಹಾರ್ನಬಿಲ್ ಸಭಾಭವನದಲ್ಲಿ ಏಶಿಯನ್ ನೆಟ್ ಸುವರ್ಣ ನ್ಯೂಸ್ ಕನ್ನಡಪ್ರಭ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಇವರ ಸಹಯೋಗದಲ್ಲಿ ವನ್ಯಜೀವಿ ಸಂರಕ್ಷಣಾ ಅಭಿಯಾನದ ಅಂಗವಾಗಿ ಜೋಯಿಡಾ ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತಗೆ ಅತ್ಯುತ್ತಮ ಅರಣ್ಯ ಸ್ನೇಹಿ ಗ್ರಾಮ ಪಂಚಾಯತ ಪ್ರಶಸ್ತಿ ಲಭಿಸಿದೆ. ವನ್ಯಜೀವಿ ಸಂರಕ್ಷಣಾ ಅಭಿಯಾನದ ರಾಯಭಾರಿ ಕನ್ನಡ ಚಲನಚಿತ್ರ ರಂಗದ ಖ್ಯಾತ ಚಿತ್ರ ನಟ ಗೋಲ್ಡನ್ ಸ್ಟಾರ್ ಗಣೇಶ ಈ ಪ್ರಶಸ್ತಿಯನ್ನು ನಂದಿಗದ್ದೆ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಅರುಣ ದೇಸಾಯಿ ಮತ್ತು ಅಭಿವೃದ್ಧಿ ಅಧಿಕಾರಿ ದತ್ತಾತ್ರೇಯ ಸಿ ಅವರಿಗೆ ನೀಡಿದರು.

ಈ ಸಂದರ್ಭದಲ್ಲಿ ಕೆನರಾ ವೃತ್ತದ ಸಿಸಿಎಫ್ ಟಿ ಹೀರಾಲಾಲ್, ಹಳಿಯಾಳ ವಿಭಾಗದ ಡಿ.ಸಿ.ಎಫ್ ಪ್ರಶಾಂತಕುಮಾರ ಕೆ ಸಿ, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ನಿಲೇಶ ಶಿಂಧೆ,ಕನ್ನಡ ಪ್ರಭ ದಿನಪತ್ರಿಕೆಯ ಗೌರವ ಸಂಪಾದಕರಾದ ಜೋಗಿಯವರು, ಕಾರ್ಯಕ್ರಮದ ರೂವಾರಿ ವಿನೋದ ನಾಯ್ಕ,ನಂದಿಗದ್ದೆ ಗ್ರಾಮ ಪಂಚಾಯತದ ನಿಕಟ ಪೂರ್ವ ಉಪಾಧ್ಯಕ್ಷರಾದ ದಾಕ್ಷಾಯಣಿ ದಾನಶೂರ,ನಿಕಟ ಪೂರ್ವ ಸದಸ್ಯರಾದ ಧವಳೋ ಗಣೇಶ ಸಾವರ್ಕರ,ಸುಮನಾ ಹರಿಜನ,ಸುಕನ್ಯಾ ದೇಸಾಯಿ, ಭಾರತಿ ಹೆಗಡೆ,ಮಂಗಲಾ ಉಪಾಧ್ಯ,ಉಷಾ ಭಾಗ್ವತ, ಸಿಬ್ಬಂದಿಗಳಾದ ರಜತ್,ಕ್ಲೇವನ್, ಹಾಗೂ ಊರ ನಾಗರಿಕರು ಪ್ರಶಸ್ತಿ ಪ್ರಧಾನ ಸಂದರ್ಭದಲ್ಲಿ ಇದ್ದರು.