ಸುದ್ದಿ ಕನ್ನಡ ವಾರ್ತೆ
ಜೋಯಿಡಾ ದಲ್ಲಿ ಅಡಿಕೆಗೆ ಎಲೆ ಚುಕ್ಕಿ ರೋಗ ಬರುತ್ತಿದೆಯೇ,ಬಂದಿದೆಯೇ?, ಮುಂದೇನು?? ಎಂಬ ಆತಂಕ ದಲ್ಲಿ ಅಡಿಕೆ ಬೆಳೆಗಾರರು ಚಿಂತಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ರೈತರ ಪ್ರಮುಖ ಬೆಳೆ ಅಡಿಕೆಗೆ ಈಗಾಗಲೇ ಎಲೆ ಚುಕ್ಕಿ ರೋಗ ಬಂದಿರುವುದು ತಿಳಿದ ವಿಷಯ ವಾದರೂ, ರೋಗ ನಿವಾರಣೆ ಆಗಬಹುದು ಎಂಬ ಆಶೆ ರೈತರಿಗಿತ್ತು,
ಆದರೆ ಪ್ರತಿವರ್ಷ ರೋಗ ಹೆಚ್ಚುತ್ತಲೇ ಹೋಗುತ್ತಿದೆ, 2 ವರ್ಷ ಗಳ ಹಿಂದೆ ಭಟ್ಕಳ ದಿಂದ ಆರಂಭ ವಾದ ಎಲೆ ಚುಕ್ಕಿ ರೋಗ ಈಗ ಜಿಲ್ಲೆಯ ಎಲ್ಲ ರೈತರ ಅಡಿಕೆ ತೋಟಗಳಲ್ಲೂ ನೆಲೆಯಾಗಿದೆ, ಹೀಗಾಗಿ ಎಲ್ಲ ರೈತರು ಆತಂಕ ಪಡುತ್ತಿದ್ದಾರೆ. ಮನಸ್ಸಿನ ದುಗುಡ ಹೇಳಲು ಸಾಧ್ಯವಿಲ್ಲ, ಆದರೆ ಹೇಳಲೇ ಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ. ರೈತರ ತೋಟಗಳಿಗೆ ಬಂದಿರುವ ಎಲೆ ಚುಕ್ಕಿ ರೋಗ ನಿವಾರಣೆ ನಮ್ಮಕಂಪನಿ ಔಷದಿ ಯಿಂದ ನಿವಾರಣೆ ಸಾಧ್ಯ ಎಂದು ಹಲವು ಔಷದಿ ಕಂಪನಿ ಗಳು ಬಂದಿವೆ. ಆದರೆ ನಿಜವಾದ ಆರೈಕೆ ಯಾವ ಕಂಪನಿ ಯಿಂದ ಎಂದು ತಿಳಿದು ಕೊಳ್ಳಲು ರೈತರಿಗೆ ಕಷ್ಟಕರ ವಾಗಿದೆ, ಹೀಗಾಗಿ ರೈತರ ಹಿತ ರಕ್ಷಣೆ ಮಾಡುತ್ತಿರುವ ತಾಲೂಕಿನ ಸಹಕಾರಿ ಸಂಘ ಗಳು ಅಗತ್ಯ ಕ್ರಮ ಕೈಕೊಳ್ಳಲು ಜನತೆ ಬಯಸಿದ್ದಾರೆ. ಸಹಕಾರಿ ಸಂಘ ಗಳು ತಮ್ಮ ವ್ಯಾಪ್ತಿಯ ರೈತರಿಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಂದ, ಕೃಷಿ ತಜ್ಞ ರಿಂದ, ಬಲ್ಲ ರೈತರುಗಳಿಂದ ಮಾಹಿತಿಯನ್ನು ಒದಗಿಸಿ ಕೊಟ್ಟಲ್ಲಿ ಮುಂದೆ ಆಗಬಹುದಾದ, ಅನಿಷ್ಟ ವನ್ನು ತಡೆಗಟ್ಟಲು ಸಹಕಾರ ಆಗಬಹುದು ಎಂಬ ಮಾತುಗಳು ಕೇಳಿ ಬಂದಿವೆ. ಈ ಬಗ್ಗೆ ತಾಲೂಕಿನ ಕೃಷಿ, ತೋಟಗಾರಿಕಾ ಇಲಾಖೆಗೆ, ಗ್ರಾಮ ಪಂಚಾಯತ ವತಿಯಿಂದ ಸಹಕಾರಿ ಸಂಘ ಗಳಿಂದ ಮಾಹಿತಿ ಯನ್ನು ಕಳಿಸಿದರೆ, ಆ ಇಲಾಖೆ ಗಳು ಕೂಡ ಅಗತ್ಯ ಕ್ರಮ ಕೈಕೊಂಡು ರೈತರ ಹಿತಕ್ಕೆ ಬರುವ ಸಾಧ್ಯತೆಗಳಿವೆ.
