ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ತಾಲೂಕಿನ ಗುಂದದ ಪ್ರೌಢಶಾಲೆಯ ಮಕ್ಕಳಿಂದ ಎಸ್‌ ಎಸ್ಎಲ್ ಸಿ ಪರೀಕ್ಷೆಯಲ್ಲಿ 100 % ಫಲಿತಾಂಶ ದಾಖಲಾಗಿದೆ.

ಗುಂದ ಪ್ರೌಢಶಾಲೆಯ ವಿದ್ಯಾರ್ಥಿನಿ ಅರ್ಪಿತಾ ವಸಂತ ಭಾಗ್ವತ 564/625 ಕ್ಕೆ, ಪ್ರೀತಿ ರವೀಂದ್ರ ಸಾವರಕರ 563/625ಕ್ಕೆ,ಸ್ನೇಹಾ ಶ್ರೀಕೃಷ್ಣ ಕುಟ್ಟಿಕರ 523/625ಕ್ಕೆ ಪಡೆದಿದ್ದಾರೆ, 14 ಮಕ್ಕಳು ಪರೀಕ್ಷೆ ಬರೆದಿದ್ದು ಎಲ್ಲರೂ ಪಾಸಾಗಿದ್ದಾರೆ.

ಉತ್ತಿರ್ಣರಾದ ಶಾಲೆಯ ವಿಧ್ಯಾರ್ಥಿಗಳನ್ನು ಗುಂದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಜೋಸಫ್ ಗೊನ್ಸಾಲಿಸ್ ಸಹ ಶಿಕ್ಷಕರಾದ ನವೀನ ಶೇಟ್, ಪುರುಷೋತ್ತಮ ಜಿ,ಗೋಕುಲ ಸ್ಥಳೇಕರ,ಫಕೀರಪ್ಪ ದರಿಗೊಂಡ, ದಿವ್ಯಾ ಮೇಡಂ, ರಿಯಾ, ಬಸವರಾಜ,ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು,ಉಪಾಧ್ಯಕ್ಷರು,ಸರ್ವ ಸದಸ್ಯರು,ಪಾಲಕರು,ಪೋಷಕರು, ಶಿಕ್ಷಣ ಇಲಾಖೆಯ ಅಧಿಕಾರಿ ವರ್ಗ, ಶಿಕ್ಷಣ ಪ್ರೇಮಿಗಳು,ಗ್ರಾಮ ಪಂಚಾಯತ ನಿಕಟಪೂರ್ವ ಜನಪ್ರತಿನಿಧಿಗಳು,ಸಾರ್ವಜನಿಕರು ಅಭಿನಂದಿಸಿದ್ದಾರೆ.