ಸುದ್ದಿ ಕನ್ನಡ ವಾರ್ತೆ
ಬೈಲಹೊಂಗಲ : ಇಲ್ಲಿಯ ನಗರಸಭೆ ಸಂಚಾಲಿತ ಶೂರ ಸಂಗೊಳ್ಳಿ ರಾಯಣ್ಣ (ಎಂಸ್ಸೆಸ್ಸೆಆರ್) ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಶೇ.100 ರಷ್ಟಾಗಿದೆ. 114 ವರ್ಷಗಳ ಇತಿಹಾಸ ಹೊಂದಿರುವ ಪ್ರೌಢಶಾಲೆಯಲ್ಲಿ ಇದೇ ಮೊದಲ ಬಾರಿಗೆ ಶೇ.100 ಫಲಿತಾಂಶ ಕಂಡಿದೆ. ಶಾಲೆಯಲ್ಲಿ ಕಡು ಬಡವ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿರುವುದರಿಂದ ಶಾಲೆಯ ಫಲಿತಾಂಶ ಶೇ.100 ಆಗುವುದು ಈವರೆಗೆ ಕಷ್ಟಸಾಧ್ಯವಾಗಿದೆ.

ಸಂದೀಪ ಅಗಸಿಮುಂದಿನ ಶೇ.97.28 (ಪ್ರಥಮ), ಸಂದೇಶ ಅಸುಂಡಿ ಶೇ.95.36 (ದ್ವಿತೀಯ), ಅಶ್ವಿನಿ ಸುಣಗಾರ ಶೇ.95.20 ಮತ್ತು ಪ್ರೀತಿ ಬಡಿಗೇರ ಶೇ.95.20 (ತೃತೀಯ) ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಸಕ ಮಹಾಂತೇಶ ಕೌಜಲಗಿ, ಉಪವಿಭಾಗಾಧಿಕಾರಿ ಪ್ರವೀಣ ಜೈನ್, ತಹಶೀಲ್ದಾರ ಹನುಮಂತ ಶಿರಹಟ್ಟಿ, ನಗರಸಭೆ ಪೌರಾಯುಕ್ತೆ ಭಾಗ್ಯಶ್ರೀ ಹುಗ್ಗಿ, ಬಿಇಒ ಎ.ಎನ್.ಪ್ಯಾಟಿ, ಮುಖ್ಯಾಧ್ಯಾಪಕ ಎಂ.ಸಿ.ಹಂಗರಕಿ, ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ, ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ರುದ್ರಪ್ಪ ಕೊಪ್ಪದ,ಜಾಗತಿಕ ಲಿಂಗಾಯತ ಮಹಾಸಭಾದ ಬೈಲಹೊಂಗಲ ನಗರ ಘಟಕದ ಅಧ್ಯಕ್ಷರಾದ ಮಹೇಶ ವೀರಭದ್ರಪ್ಪ ಕೋಟಗಿ( ಉಡಿಕೇರಿ),ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಧ್ಯಕ್ಷರಾದ ಸಂತೋಷ ಚಂದ್ರಪ್ಪ ಕೊಳವಿ,ಉಪಾಧ್ಯಕ್ಷರಾದ ಶ್ರೀಶೈಲ ಉಳವಪ್ಪ ಶರಣಪ್ಪನವರ ನಗರಸಭೆ ಅಧಿಕಾರಿಗಳು, ಶಿಕ್ಷಕರು, ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ಸಂದೀಪ ಅಗಸಿಮುಂದಿನ 1

ಸಂದೇಶ ಅಸುಂಡಿ 2

ಅಶ್ವಿನಿ ಸುಣಗಾರ 3

ಪ್ರೀತಿ ಬಡಿಗೇರ 3
——————————————————