ಸುದ್ದಿ ಕನ್ನಡ ವಾರ್ತೆ

ಜೊಯಿಡಾ : ತಾಲೂಕಿನ 2025-26 ನೇ ಸಾಲಿನ ಹತ್ತನೇ ತರಗತಿಯ ಫಲಿತಾಂಶ ಪ್ರಕಟಗೊಂಡಿದೆ. ಒಟ್ಟು 18 ಪ್ರೌಢಶಾಲೆಗಳಿದ್ದು 10 ಪ್ರೌಢ ಶಾಲೆಗಳು ಶೇಕಡಾ 100 ಸಾಧನೆ ಮಾಡಿದೆ. ತಾಲೂಕಿನ ಒಟ್ಟು ಫಲಿತಾಂಶ ಶೇಕಡಾ 94.25 ದಾಖಲಾಗಿದೆ.ತಾಲೂಕಿನ ಕ್ಯಾಸಲರಾಕ್ ಸರ್ಕಾರಿ ಪ್ರೌಢಶಾಲೆ ವಿಧ್ಯಾರ್ಥಿನಿ ನಿಧಿ ಶಾಂತಾರಾಮ್ ಮಹೇಕರ 625 ಕ್ಕೆ 611 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಹರ್ಷಿತಾ ಲಿಂಗರಾಜ ಓಂಕಾರ್ ಅಣ್ಣನವರ ಕಿತ್ತೂರ ರಾಣಿ ಚೆನ್ನಮ್ಮ ರಾಮನಗರ 625 ಕ್ಕೆ 602 ದ್ವಿತೀಯ, ಜಾನ್ವಿ ನಾರಾಯಣ ಹಣಬರ ಕಿತ್ತೂರ ರಾಣಿ ಚೆನ್ನಮ್ಮ ರಾಮನಗರ 625 ಕ್ಕೆ 598 ಹಾಗೂ ಪ್ರಥ್ವಿರಾಜ ಪ್ರಶಾಂತ್ ದೇಸಾಯಿ ಸರ್ಕಾರಿ ಪ್ರೌಢಶಾಲೆ ಅನಮೋಡ 625 ಕ್ಕೆ 598 ಅಂಕ ಪಡೆದು ಇಬ್ಬರು ತಾಲೂಕಿಗೆ ಮೂರನೇ ಸ್ಥಾನ ಪಡೆದಿದ್ದಾರೆ. ತಾಲೂಕಿನಲ್ಲಿ ಒಟ್ಟು 748 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ 705 ವಿದ್ಯಾರ್ಥಿಗಳು ಉತ್ತೀರ್ಣ ರಾಗಿದ್ದಾರೆ. ತಾಲೂಕಿನ ಒಟ್ಟು ಫಲಿತಾಂಶ ಶೇಕಡಾ 94.25 ದಾಖಲಾಗಿದೆ. ತಾಲೂಕಿನಲ್ಲಿ ಒಟ್ಟು18 ಪ್ರೌಢ ಶಾಲೆ ಗಳಿದ್ದು ಇದರಲ್ಲಿ 10 ಪ್ರೌಢಶಾಲೆಗಳು ಶೇಕಡಾ 100 ಸಾಧನೆ ಮಾಡಿದೆ. ಸರ್ಕಾರಿ ಪ್ರೌಢಶಾಲೆ ಕುಂಬಾರ ವಾಡಾ, ಸರ್ಕಾರಿ ಪ್ರೌಢಶಾಲೆ ಕ್ಯಾಸಲರಾಕ್, ರೇಲ್ವೆ ಕ್ಯಾಸಲರಾಕ್, ಉಳವಿ ಚನ್ನಬಸವೇಶ್ವರ, ಸರ್ಕಾರಿ ಪ್ರೌಢಶಾಲೆ ಅನಮೋಡ, ಸರ್ಕಾರಿ ಪ್ರೌಢಶಾಲೆ ಗುಂದ, ಸರ್ಕಾರಿ ಪ್ರೌಢಶಾಲೆ ಅಣಶಿ, ಮೂರಾರ್ಜಿ ವಸತಿ ದೇಸಾಯಿ ಶಾಲೆ ಜೊಯಿಡಾ, ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ ರಾಮನಗರ, ಹೋಲಿ ಫ್ಯಾಮಿಲಿ ಜೋಯಿಡಾ ಶೇಕಡಾ 100 ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಉತ್ತಮ ಸಾಧನೆ ಮಾಡಿದೆ. ಶ್ರೀ ರಾಮ ಸರ್ಕಾರಿ ಪ್ರೌಢಶಾಲೆ ಜೊಯಿಡಾ, ಸರ್ಕಾರಿ ಪ್ರೌಢಶಾಲೆ ಬಾಪೇಲಿ, ಸರ್ಕಾರಿ ಪ್ರೌಢಶಾಲೆ ಜಗಲಪೇಟ, ಕೆ ಎಚ್. ಪಿ. ಗಣೇಶ ಗುಡಿ, ಸರ್ಕಾರಿ ಪ್ರೌಢಶಾಲೆ ಅಸು, ಸರ್ಕಾರಿ ಪ್ರೌಢಶಾಲೆ ರಾಮನಗರ, ಸರ್ಕಾರಿ ಪ್ರೌಢಶಾಲೆ ತಿನೈಘಾಟ, ಸರ್ಕಾರಿ ಪ್ರೌಢಶಾಲೆ ಬೈಲಪಾರ ಉತ್ತಮ ಸಾಧನೆ ಮಾಡಿದೆ.