Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಕೇಂದ್ರ ಸ್ಥಾನದ ಸರ್ಕಲ್ ನಲ್ಲಿ ಭಾರತದ ಸಂವಿಧಾನದ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 135 ನೇ ಜನ್ಮದಿನಾಚರಣೆಯ ನಿಮಿತ್ತ ಜೈಭೀಮ್ ಜೋಯಿಡಾದ ವತಿಯಿಂದ ​ದಿನಾಂಕ: 14/4/2026 ರ ​ಬೆಳಿಗ್ಗೆ 10:00 ಗಂಟೆಗೆ ಅಂಬೇಡ್ಕರ್ ಅವರ ಭಾವಚಿತ್ರದ ಪೂಜೆಯನ್ನು ಜೋಯಿಡಾದ ಮಿರಾಶಿಗಳಾದ ಗಾವಡೆವಾಡಾದ ವಿನೋದ ಮಿರಾಶಿಯವರು ನಡೆಸಿಕೊಟ್ಟು ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವಂತೆ ಶುಭ ಹಾರೈಸಿದರು.

Banner Ad

​ಸಂಜೆ 4:00 ಗಂಟೆಗೆ ವೇದಿಕೆ ಕಾರ್ಯಕ್ರಮದಲ್ಲಿನ ಗಣ್ಯರನ್ನು ರಾಜೇಶ ಗಾವಡೆ ಸಂಚಾಲಕರು ಜೋಯಿಡಾ ಆತ್ಮೀಯವಾಗಿ ಸ್ವಾಗತಿಸಿದರು.ನಂತರ ಸಂವಿಧಾನ ಪೀಠಿಕೆ ಓದುವುದು ಹಾಗೂ ನಾಡಗೀತೆ ಹಾಡಿನ ಜೋಯಿಡಾದ PM Shri ಶಾಲೆಯ ವಿದ್ಯಾರ್ಥಿಗಳಿಂದ ನಡೆಯಿತು.
ವೇದಿಕೆಯ ಕಾರ್ಯಕ್ರಮದ ​ಮುಖ್ಯ ಅತಿಥಿಗಳಾಗಿ ರವಿ ರೆಡ್ಕರ್, ​ಅತಿಥಿಗಳಾಗಿ ​ಸಂತೋಷ ಮಂತೆರೋ,ರಪೀಕ್ ಖಾಜಿ,ಮಹಾದೇವ ಹಳದನಕರ,ಸಮೀರ್ ಮುಜಾವರ,ಚವ್ಹಾಣ ಸರ್,ಯಶವಂತ ನಾಯ್ಕ, ಭಾಸ್ಕರ ಗಾಂವ್ಕರ,ರೇಣುಕಾ ಹರಿಜನ,ಅಶ್ವಿನಿ ಹಳದನಕರ, ವಾಸು ಹರಿಜನ ಇದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಕಾಂತ ಕಾಂಬಳೆ ಕ.ದ.ಸಂ.ಸಮಿತಿಯವರು ವಹಿಸಿದ್ದರು.

​ವೇದಿಕೆಯ ಮೇಲಿನ ಎಲ್ಲಾ ಗಣ್ಯ ವ್ಯಕ್ತಿಗಳು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮದ ಕುರಿತು ವೇದಿಕೆಯ ಮೇಲಿನ ಗಣ್ಯರು ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನ,ಸಾಧನೆ,ಸಂವಿಧಾನ ರಚನೆಯಲ್ಲಿನ ಪಾತ್ರದ ಕುರಿತು ಸಂದರ್ಭೋಚಿತವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕಳೆದ ವರ್ಷದ
​SSLC ಪರೀಕ್ಷೆಯಲ್ಲಿ ಅತೀ ಹೆಚ್ಚಿನ ಅಂಕ ಪಡೆದ ಸುಜಲ ಹರಿಜನ ಜೋಯಿಡಾ, ಜಯಾ ಅನಿಲ ಹರಿಜನ,ಸಮೀಕ್ಷಾ ಸಣದಿ ರಾಮನಗರ ಇವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಬಹುಮಾನದ ಪ್ರಾಯೋಜಕರು ಗಜಾನನ ಪರವಾರ, ಹಣಕೋಣ,ಕಾರವಾರ. ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಕರಾಟೆ ವಿದ್ಯಾರ್ಥಿಗಳಾದ ಶಾಹಿಲ್ ಶ್ರೀಕಾಂತ ಹರಿಜನ, ಸಕ್ಷಮ ರಾಜೇಶ ಗಾವಡೆ,ಆಯುಷ ಅನಿಲ ಗಾವಡೆ ಇವರಿಗೆ ಬಹುಮಾನ ವಿತರಿಸಲಾಯಿತು. ಶ್ರೀಕಾಂತ ಕಾಂಬಳೆ ಅಧ್ಯಕ್ಷರು ಕ.ದ.ಸಂ.ಸಮಿತಿ ಜೋಯಿಡಾ ಇವರ ಮುಂದಾಳತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಜಯ ಹರಿಜನ, ಓಂಕಾರ ಹರಿಜನ, ಅಜೀತ ಹರಿಜನ,ತಾತು ಹರಿಜನ, ಮಹಾದೇವ ಹರಿಜನ, ಪ್ರಕಾಶ ಹರಿಜನ ಮತ್ತು ಎಲ್ಲ ಸಮುದಾಯದ ಬಂಧು ಮಿತ್ರರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
​

Banner Ad