Banner Ad

ಸುದ್ದಿ ಕನ್ನಡ ವಾರ್ತೆ

ಬೆಂಗಳೂರಿನಲ್ಲಿ ನಡೆದ ರಾಜ್ಯ ಕೇರಂ ಶ್ರೇಯಾಂಕ ಪಂದ್ಯಾವಳಿಯ 18 ವರ್ಷದ ವಯೋಮಾನದ ಒಳಗಿನ ಹುಡುಗಿಯರ ವಿಭಾಗದಲ್ಲಿ ಶಿರಸಿಯ ಅಪೇಕ್ಷಾ ಬಾಲಚಂದ್ರ ಭಂಡಾರಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುತ್ತಾಳೆ.

Banner Ad

ಇವಳು ಶಾಸಕರ ಮಾದರಿಯ ಶಾಲೆ ನಂ 2 ರಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಾಳೆ.
ಕಳೆದ 3 ವರ್ಷದಿಂದ ಶಿರಸಿಯ ದೇವಿಕೆರೆಯ ಸ್ಫೂರ್ತಿ ಕೇರಂ ಅಸೋಸಿಯೇಷನ್ ನಲ್ಲಿ ಕೇರಂ ಕಲಿಯುತ್ತಿದ್ದಾಳೆ. ಹಾಗೆ ಕರ್ನಾಟಕದಿಂದ ರಾಷ್ಟ್ರಮಟ್ಟಕ್ಕೆ ಸ್ಪರ್ಧಿಸಲು ಹುಡುಗಿಯರ ವಿಭಾಗದಲ್ಲಿ ಪ್ರಿಯಾ ಭಟ್, ಹುಡುಗರ ವಿಭಾಗದಲ್ಲಿ ವಿಷ್ಣು ಹರ್ಡಿಕರ ಮತ್ತು ಸಾತ್ವಿಕ್ ದೇವಡಿಗ ಶಿರಸಿ, ಮತ್ತು ಮಹಿಳೆಯರ ವಿಭಾಗದಲ್ಲಿ ಶಾಲಿನಿ ಹೆಗಡೆ ಆಯ್ಕೆಯಾಗಿದ್ದಾರೆ.

Banner Ad