Banner Ad

ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ತಾಲೂಕಿನ ಗುಳ್ಳಾಪುರದ ಚಿಕ್ಕುಮನೆ ಕ್ರಾಸ್ ಬಳಿ ಟಿಪ್ಪರ್ ಲಾರಿ ಹಾಗೂ ಇಕೊ ವಾಹನದ ನಡುವೆ ಅಪಘಾತ ಸಂಭವಿಸಿ ಓರ್ವ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ತಾಲೂಕಿನ ಗುಳ್ಳಾಪುರದ ಚಿಕ್ಕುಮನೆ ಕ್ರಾಸ್ ಬಳಿ ನಡೆದಿದೆ.


ಇಕೊ ವಾಹನದ ಚಾಲಕ ಶಿವಾನಂದ ಸುಬ್ರಾಯ ಅಂಬಿಗ ಮೃತಪಟ್ಟ ವ್ಯಕ್ತಿ. ನಾಗೇಶ ಗುಣವಂತ ಅಂಬಿಗ, ಸುಮಿತ್ರಾ ಶಿವಾನಂದ ಅಂಬಿಗ ಹಾಗೂ ಸುಶಾಂತ ಶಿವಾನಂದ ಅಂಬಿಗ ಗಾಯಗೊಂಡವರು.

Banner Ad


ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಬರುತ್ತಿದ್ದ ಎದುರಿನಿಂದ ಬರುತ್ತಿದ್ದ ಇಕೊ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇಕೊ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಘಟನೆಯಲ್ಲಿ ಇಕೊ ವಾಹನ ಸಂಪೂರ್ಣ ಜಖಂಗೊಂಡಿದೆ. ಟಿಪ್ಪರ್ ಲಾರಿ ಪಲ್ಟಿಯಾಗಿದ್ದು, ಲಾರಿಯಲ್ಲಿದ್ದ ಜಲ್ಲಿ, ಸಿಮೆಂಟ್ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Banner Ad