Banner Ad

ಸುದ್ದಿ ಕನ್ನಡ ವಾರ್ತೆ
ಶಿರಸಿ:ನಗರದ ಮರಾಠಿಕೊಪ್ಪದ ಅಂಜನಾದ್ರಿಯ ಹಸಿರು ಪರಿಸರದಲ್ಲಿರುವ ಅಂಜನೇಯ ದೇವಸ್ಥಾನದ ಅವಾರದಲ್ಲಿ ಹನುಮ ಜಯಂತಿ ಪ್ರಯುಕ್ತ ಇದೇ ಪ್ರಪ್ರಥಮ ಬಾರಿಗೆ ಆಯೋಜಿಸಲಾಗಿದ್ದ ಪೌರಾಣಿಕ ಯಕ್ಷಗಾನ “ಮಾರುತಿ ಪ್ರತಾಪ”ಕಲಾಭಿಮಾನಿಗಳ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಜ್ಯೋತಿ ಬೆಳಗುವ ಮೂಲಕ ದೇವಸ್ಥಾನದ ಅಡಳಿತ ಮಂಡಳಿಯ ಅಧ್ಯಕ್ಷ ಕಿರಣ ಚಿತ್ರಕಾರ ಹಾಗೂ ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶುಭ ಹಾರೈಸಿದರು. ನಂತರ ಗಣಪತಿ ಪೂಜೆಯೊಂದಿಗೆ ಆರಂಭಗೊಂಡ ಯಕ್ಷಗಾನದಲ್ಲಿ ಹನುಮಂತನಾಗಿ ಗಣಪತಿ ಹೆಗಡೆ ತೋಟಿಮನೆ ಹಾಗೂ ನಾರದನಾಗಿ ಅಶೋಕ ಭಟ್ಟ ಸಿದ್ದಾಪುರ ಮತ್ತು ಕೃಷ್ಣನಾಗಿ ವಿನಯ ಬೇರೊಳ್ಳಿ ವೈವಿಧ್ಯಮಯ ಅಭಿನಯ ಹಾಗೂ ಸಂಭಾಷಣೆಯೊಂದಿಗೆ ಕಿಕ್ಕಿರಿದ ಕರತಾಡನಕ್ಕೆ ಭಾಜನರಾದರು.

Banner Ad

ಅಭಿಮಾನಿಗಳ
ಬಲರಾಮನಾಗಿದ್ದ ವಿನಯ ಹೊಸ್ತೋಟ, ಸತ್ಯಭಾಮೆಯಾಗಿದ್ದ ನಿರ್ಮಲಾ ಗೋಳಿಕೊಪ್ಪ, ದೂತನಾದ ಸುಜಯ ಕೋಳಿಗಾರ ಹಾಗೂ 2ನೇ ಕೃಷ್ಣನಾಗಿ ಪ್ರತೀಕ್ ಹೆಗಡೆ, ಸಖಿಯಾಗಿ ಭಾಗ್ಯಶ್ರೀ ಶಿರಸಿ ಆಯಾ ಪಾತ್ರಕ್ಕೆ ಜೀವ ತುಂಬಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಪಾಲ್ಗೊಂಡ ಸರ್ವೇಶ್ವರ ಮುರೂರು, ಗಜಾನನ ಭಟ್ಟ ತುಳಗೇರಿ ದ್ವಂದ್ವವಾಗಿ ಪದ್ಯಗಳನ್ನು ಪ್ರಸ್ತುತಗೊಳಿಸುತ್ತ ಭಕ್ತಿರಸಕ್ಕೆ ಭಟ್ಟ ಕೊಂಡೊಯ್ದರು. ಮದ್ದಲೆಯಲ್ಲಿ ನರಸಿಂಹ ಹಂಡೇಮನೆ, ಚಂಡೆ ವಾದನದಲ್ಲಿ ಚಂಡೆ ಮಾಂತ್ರಿಕ ಗಣೇಶ ಗಾಂಷ್ಕರ ಕನಕನಹಳ್ಳಿ ಸಹಕಾರ ನೀಡಿದರು. ದೇವಸ್ಥಾನದ ಆಡಳಿತ ಸಮಿತಿ ವತಿಯಿಂದ ಕಲಾವಿದರನ್ನು ಗೌರವಿಸಲಾಯಿತು. ಗಿರಿಧರ ಕಬ್ಬಳ್ಳಿ ನಿರೂಪಿಸಿದರು.

Banner Ad