ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ತಾಲೂಕಿನ ಅಣಶಿ ಗ್ರಾಮ ಪಂಚಾಯತ ವ್ಯಾಪ್ತಿಯ ನಿಗುಂಡಿ ಪಾಲ್ಸ್ ಹಾಗೂ ಬಾಡಪೋಲಿ ಬಳಿ ಅಣಶಿ ಗ್ರಾಮ ಪಂಚಾಯತ ವತಿಯಿಂದ ಸ್ವಚ್ಚತಾ ಕಾರ್ಯ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಣಶಿ ಗ್ರಾಮ ಪಂಚಾಯತ ಆಡಳಿತ ಅಧಿಕಾರಿ ಸಂತೋಷ ಎಕ್ಕಳ್ಳಿಕರ ನಾವೆಲ್ಲರೂ ಸ್ವಚ್ಚತೆಗೆ ಮೊದಲು ಆಧ್ಯತೆ ನೀಡಬೇಕು, ಜೋಯಿಡಾ ಇದು ಸುಂದರವಾದ ತಾಲೂಕು, ಅಣಶಿ ಭಾಗದಲ್ಲಿ ಮಳೆಗಾಲದಲ್ಲಿ ಬಹಳಷ್ಟು ಪಾಲ್ಸ್ ಗಳನ್ನು ನಾವು ನೋಡಬಹುದಾಗಿದೆ, ಅಂತೆಯೆ ಅಲ್ಲಿಯ ಸ್ವಚ್ಚತೆ ಕಾಪಾಡುವುದು ಅಷ್ಟೇ ಮುಖ್ಯವಾಗಿದೆ,ಪ್ರವಾಸಿ ತಾಣಗಳ ಹಾಗೂ ನಮ್ಮ ಸುತ್ತಮುತ್ತಲಿನ ಜಾಗಗಳನ್ನು ನಾವು ಪ್ಲಾಸ್ಟಿಕ್ ಮುಕ್ತ ಹಾಗೂ ಕಸ ಮುಕ್ತವನ್ನಾಗಿಸಬೇಕು ಎಂದರು.

ಈ ಸಂದರ್ಭದಲ್ಲಿ ಮುರುಡೇಶ್ವರ RNS ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿ ನಿಂಗಪ್ಪ ಎನ್‌, ಪಂಚಾಯತ ಕಾರ್ಯದರ್ಶಿ ಲಕ್ಷ್ಮಣ ಬರ್ಸೇಕರ, ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷೆ ಪುಷ್ಪಾ ವೇಳಿಪ, ಗ್ರಾಮ ‌ ಪಂಚಾಯತನ ವಿನಂತಿ ದೇಸಾಯಿ, ನೀತಾ ಪಾಟೇಕರ,ಭಾರತಿ ಅಣಶಿಕರ,ರೇಷ್ಮಾ ಅಣಶಿಕರ,ಸುರೇಶ ಅಣಶಿಕರ, ರಮೇಶ ಸಾವಂತ ಗ್ರಂಥಪಾಲಕರು, ಆರೋಗ್ಯ ಇಲಾಖೆ,ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆ ,ಅರಣ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.