ಸುದ್ದಿ ಕನ್ನಡ ವಾರ್ತೆ
ತಾಲೂಕಿನ ಗುಂದ ದ ವನ್ಯ ಮಾರುತಿ ಮಂದಿರ ನಂದಿಗದ್ದೆ ಯಲ್ಲಿ ಗುರುವಾರ ಚೈತ್ರ ಶುದ್ಧ ಹುಣ್ಣಿಮೆ ದಿನ ಹನುಮ ಜಯಂತಿ ಮತ್ತು ವಾರ್ಷಿಕೋತ್ಸವ ವನ್ನು ಆಚರಿಸಲಾಗುತ್ತಿದೆ.
ಗುರುವಾರ ಬೆಳಿಗ್ಗೆ ಯಿಂದಲೇ ವಿವಿಧ ಧಾರ್ಮಿಕ ಸೇವೆಗಳುಪ್ರಾರಂಭ ವಾಗಿ ತೊಟ್ಟಿಲು ಸೇವೆ ,ಪೂಜೆ, ಸತ್ಯನಾರಾಯಣ ಪೂಜೆ, ಮಹಾಪೂಜೆ ಗಳು ನಡೆಯುತ್ತದೆ,ವೇದಮೂರ್ತಿ ಹರಿಹರ ಬಟ್ಟರ ನೇತೃತ್ವದಲ್ಲಿ ಪೂಜೆಗಳು ನಡೆದು ಮದ್ಯಾಹ್ನ 1 30 ರ ನಂತರ ಅನ್ನ ಸಂತರ್ಪಣೆ ನಡೆಯುವದು ಆದ್ದರಿಂದ ಊರಿನ ಸದ್ಭಕ್ತರು, ಪೂಜೆ ಯಲ್ಲಿ ಬಾಗವಹಿಸಿ ದೇವರ ಕೃಪೆಗೆ ಪಾತ್ರ ರಾಗಬೇಕೆಂದು, ಅಧ್ಯಕ್ಷರು ವನ್ಯ ಮಾರುತಿ ಮಂದಿರ ಮತ್ತು ಗುಂದ ವನ್ಯ ಜೀವಿ ವಲಯದ ಅರಣ್ಯಾಧಿಕಾರಿ ನೀಲಕಂಠ ದೇಸಾಯಿ ಮತ್ತು ಅರಣ್ಯ ಇಲಾಖೆಯ, ಸಿಬ್ಬಂದಿಗಳು ವಿನಂತಿ ಸಿದ್ದಾರೆ.
