ಸುದ್ದಿ ಕನ್ನಡ ವಾರ್ತೆ

ಜೋಯಿಡಾ :- ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ತಾಲೂಕಾ ಕೇಂದ್ರದ ಬಿ.ಜಿ.ವಿ.ಎಸ್. ಪದವಿ ಪೂರ್ವ ಕಾಲೇಜು ಜೋಯಿಡಾದ ೮೪% ಪ್ರತಿಶತ ಫಲಿತಾಂಶದೊಂಧಿಗೆ ದೊಂದಿಗೆ ಅತ್ಯುತ್ತಮ ಸಾಧನೆ ಮಾಡಿದೆ. ಕಾಲೇಜಿನ ವಿದ್ಯಾರ್ಥಿನಿ ಅಪೇಕ್ಷಾ ದೇವಿದಾಸ ದೇಸಾಯಿ 93% ದೊಂದಿಗೆ ಕಾಲೇಜಿಗೆ ಪ್ರಥಮ ಬಂದಿದ್ದು ಉತ್ತಮ ಸಾಧನೆ ಮಾಡಿದ್ದಾಳೆ.

ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಅಪೇಕ್ಷಾ ದೇಸಾಯಿ 557 ಅಂಕ 93% ಪಡೆದು ಪ್ರಥಮ, ಅರ್ಚನಾ ಗುಲ್ಲೆಕರ 522ಅಂಕ87% ಪಡೆದು ದ್ವಿತೀಯ ಸ್ಥಾನ, ಸುಪ್ರೀತಾ ಗಾವಡಾ517 ಅಂಕ 86.16% ಪಡೆದು ತೃತೀಯ ಸ್ಥಾನ ಹಾಗೂ ಕಲಾ ವಿಭಾಗದಲ್ಲಿ ಆರತಿ ಮಂಜುನಾಥ ಮಿರಾಶಿ 547ಅಂಕ91.17% ಪಡೆದು ಪ್ರಥಮ ಸ್ಥಾನ, ರಂಜನಾ ತುಕಾರಾಮ ವೇಳಿಪ 514ಅಂಕ 85.67 % ಪಡೆದರೆ,
ಸೋನಾಲಿ ಗಾವಡಾ 514ಅಂಕ 85.67% ಪಡೆದಿದ್ದು ಇಬ್ಬರೂ ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ. ದಿಕ್ಷಿತಾ ವೇಳಿಪ 481 ಅಂಕ 80.16% ಪಡೆದು ತೃತೀಯ ಸ್ಥಾನ ಪಡೆದಿದ್ದಾಳೆ.

ಜೋಯಿಡಾ ಬಿ.ಜಿ.ವಿ.ಎಸ್. ಕಾಲೇಜಿನ ಸಾಧನೆಗೆ ಬಾಪೂಜಿ ಗ್ರಾಮೀಣ ವಿಕಾಸ ಸಮಿತಿ ಕಾರವಾರದ ಅಧ್ಯಕ್ಷರು ಶ್ರೀಮತಿ ವನಿತಾ ಪ್ರಭಾಕರ ರಾಣೆ, ಉಪಾಧ್ಯಕ್ಷ ಶ್ರೀಉಲ್ಲಾಸ ನಾಯ್ಕ, ಕಾರ್ಯದರ್ಶಿ ಮಂಜುನಾಥ ಪವಾರ್ , ಸಹ ಕಾರ್ಯದರ್ಶಿ ಕಿಶೋರ ರಾಣೆ , ಹಾಗೂ ಕಮಿಟಿಯ ಎಲ್ಲಾ ಸದಸ್ಯರು ಕಾಲೇಜಿನ ಪ್ರಾಚಾರ್ಯ ಮಂಜುನಾಥ ಶೆಟ್ಟಿ ಹಾಗೂ ಕಾಲೇಜಿನ ಸಿಬ್ಬಂದಿಗಳು ಅಭಿನಂದಿಸಿದ್ದು, ಮಕ್ಕಳ ಸಾಧನೆಗೆ ಶುಭಕೋರಿದ್ದಾರೆ.