ಸುದ್ದಿ ಕನ್ನಡ ವಾರ್ತೆ

ಆ ಇಬ್ಬರೂ ಗೆಳೆಯರು ಒಂದೇ ಕಡೆ ಇದ್ದು ಓದಬೇಕು ಉತ್ತಮ ಸಾಧನೆ ಮಾಡಬೇಕು ಎಂದು ಸದಾ ಹಂಬಲಿಸಿದವರು. ಆದರೆ ಒಬ್ಬನು ಯಲ್ಲಾಪುರ ತಾಲೂಕಿನ ಬಿಸಗೋಡದ ಸುಚೇತ ನಾದರೆ ಇನ್ನೊಬ್ಬನು ಜೋಯಿಡಾ ತಾಲೂಕಿನ ಗುಂದ ದ ವಿಜೇತನು ಇಬ್ಬರೂ ಸಂಬಂದಿಕರು, ನೆಂಟರು, ಮನೆಗಳಲ್ಲಿ ನಡೆಯುವ ಕಾರ್ಯಕ್ರಮ ಗಳಲ್ಲಿ ಭೇಟಿಯಾಗಿ ತಮ್ಮ ತಮ್ಮೊಳಗೆ ಆಗು ಹೋಗುಗಳ ಬಗ್ಗೆ ತಮ್ಮ ಶಿಕ್ಸಣ ಗಳ ಬಗ್ಗೆ ಚರ್ಚಿಸುತ್ತಿದ್ದರು,

ಒಂದೇ ಕಡೆಗಿದ್ದು ಓದುವ ಆಶೆಯೂ ಇತ್ತು ಆದರೆ, ಬೇರೆ ಬೇರೆ ತಾಲೂಕು ಮತ್ತು ಬೇರೆ ಬೇರೆ ಕಾರಣ ಗಳಿಂದ ಓದು ಬೇರೆ ಬೇರೆ ಯಾಗಿಯೇ ಸಾಗಿತ್ತು, ನೀನೆಷ್ಟು ಸ್ಕೋರ್ ಮಾಡುವೆ, ನಾನಿಷ್ಟು ಸ್ಕೋರ್ ಮಾಡುವೆ ಎಂಬ ಚರ್ಚೆ ಗಳು ಭೇಟಿಯಾದಾಗೆಲ್ಲ ನಡೆಯುತ್ತಿತ್ತು. ಮನೆಯ ಹಿರಿಯರೂ ಇದನ್ನು ಗಮನಿಸುತ್ತಿದ್ದರು, ಆದರೆ ಅವರವರ ಅನುಕೂಲ ಪರಿಸ್ಥಿತಿ ನೋಡಿ ಮಕ್ಕಳನ್ನು ಶಾಲೆಗೆ ಕಾಲೇಜಿಗೆ ಕಳಿಸಿದರು.ಎಸ್ ಎಸ್ ಎಲ್ ಸಿ ನಂತರ ಜೋಯಿಡಾ ದ ವಿಜೇತ ದೇಸಾಯಿ ಕುಮಟಾ ದ ಗೋರೆ ಯಲ್ಲಿರುವ ಕೆನರಾ ಎಕ್ಷಲೆನ್ಸ್ ಕಾಲೇಜಿಗೆ ಸೇರಿ ವಿಜ್ಞಾನ ವಿಷಯ ತೆಗೆದು ಕೊಂಡರೆ, ಯಲ್ಲಾಪುರದ ಸುಚೇತನು ಧಾರವಾಡ ದ ಅರ್ಜುನ ಕಾಲೇಜಿಗೆ ಸೇರಿ ವಿಜ್ಞಾನ ವಿಷಯ ವನ್ನು ಆಯ್ಕೆ ಮಾಡಿ ಕೊಂಡನು ಎರಡು ವರ್ಷ ಗಳಲ್ಲಿ ಇಬ್ಬರೂ ಭೇಟಿ ಯಾಗಿದ್ದು ತುಂಬಾ ಕಡಿಮೆ ಒಮ್ಮೆ ಮಾತ್ರ ಭೇಟಿಯಾಗಿ ಕೆಲ ಹೊತ್ತು ಮಾತಾಡಿದ್ದು ಬಿಟ್ಟರೆ ಫೋನ್ ಸಂಭಾಷಣೆ ಕೂಡ ಇಲ್ಲ ವಾಗಿತ್ತು. ಎರಡೂ ಕಾಲೇಜಿನ ಶಿಸ್ತು ಬದ್ದ ಎರಡು ವರ್ಷ ದಲ್ಲಿ ಅಭ್ಯಾಸವೇ ಅವರ ಜೀವಾಳ ವಾಗಿತ್ತು.

ಈ ವರ್ಷದ PUC ll ರ ಪರೀಕ್ಷೆ ಫಲಿತಾಂಶ ಬಂದಾಗ ಇಬ್ಬರ ಮನೆಯಲ್ಲೂ ಒಂದೇ ವಿಷಯ ಸುಚೇತನ ರಿಸಲ್ಟ್ ಎಷ್ಟಾಯಿತು, ವಿಜೇತನ ಪರ್ಸoಟೆಜ್ ಎಷ್ಟಾಯ್ತು ಎಂದಾಗಿತ್ತು, ಆದರೆ ಇಬ್ಬರೂ ಗೆಳೆಯರ ಫಲಿತಾಂಶ ಒಂದೇ ಆಗಿತ್ತು. ವಿಜ್ಞಾನ ವಿಷಯ ದಲ್ಲಿ ಇಬ್ಬರೂ 95.17 % ಪಡೆದು ಎರಡೂ ಮನೆಯವರಲ್ಲಿ ಅಚ್ಚರಿ ಮೂಡಿಸಿದ್ದರು. ಒಂದೇ ಕಡೆಗೆ ಇದ್ದು ಓದಲಿಕ್ಕೆ ಆಗದಿದ್ದರೂ ಫಲಿತಾಂಶ ಮಾತ್ರ ಒಂದೇ ಆಗಿದ್ದು ಇಬ್ಬರಲ್ಲೂ ಸಂತಸ ಮನೆಮಾಡಿದೆ. ಯಲ್ಲಾಪುರದ ಸುಚೇತ ನು ಬಿಸಗೋಡದ ಕೃಷಿಕ,ರಾಮಚಂದ್ರ ಭಟ್ ರ ಮಗನಾದರೆ ವಿಜೇತನು ಜೋಯಿಡಾ ಪತ್ರಕರ್ತ ಅನಂತ ದೇಸಾಯಿ ಅವರ ಮಗ ನಾಗಿದ್ದಾನೆ. ಕಲಿತ ಶಾಲೆ, ಕಲಿಸಿದ ಶಿಕ್ಷಕರು, ಕಾಲೇಜ್ ಉಪನ್ಯಾಸ ಕರುಗಳಿಗೆ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ.